ರೈತರಿಗೆ 0% ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸೌಲಭ್ಯ ಹೌದು ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳನ್ನ ಮುಂದುವರಿಸಲು ಹಾಗೂ ಯಂತ್ರಗಳನ್ನು ಖರೀದಿ ಮಾಡಲು 5 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ.
0% ಬಡ್ಡಿ ದರದ ವಿವರ
- ಯೋಜನೆಯ ಹೆಸರು : ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ
- ಸಾಲದ ಮೊತ್ತ : 5 ಲಕ್ಷದವರೆಗೆ
- ಬಡ್ಡಿದರ : 0% ಸರ್ಕಾರದ ಸಬ್ಸಿಡಿ ಇಂದ
- ಯೋಗ್ಯತೆ : ವಯಕ್ತಿಕ ರೈತರು, ಬಂಜಾರರು ಶೇರು ಬೆಳೆಗಾರರು,
- ಉದ್ದೇಶ : ಬೀಜ, ಗೊಬ್ಬರ, ಕೀಟನಾಶಕಗಳು, ನೀರಾವರಿ, ಸಾಧನಗಳ ಖರೀದಿ
ಯೋಜನೆಯ ಉದ್ದೇಶ
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಭಾರತ ಸರ್ಕಾರವು 1998ರಲ್ಲಿ ಪ್ರಾರಂಭಿಸಿತು ಇದರ ಮುಖ್ಯ ಉದ್ದೇಶ ರೈತರಿಗೆ ಅಗ್ಗದ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಿ ಕೃಷಿ ಚಟುವಟಿಕೆಗಳನ್ನ ಗರಿಗೆದರುವಂತೆ ಮಾಡುವಂತದ್ದು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನ ಉಪಯೋಗಿಸಿಕೊಂಡು ಕೃಷಿ ಚಟುವಟಿಕೆಗಳನ್ನ ಪ್ರಾರಂಭಿಸಲು ರೈತರಿಗೆ 5 ಲಕ್ಷದವರೆಗೆ 0 ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುವ ಉದ್ದೇಶವನ್ನು ಕೈಗೊಂಡಿದೆ.
ಅರ್ಹತಾ ಮಾನದಂಡಗಳು
- ಅರ್ಜಿದಾರರ ವಯಸ್ಸು 18 ರಿಂದ 70 ವರ್ಷದ ಒಳಗೆ ಇರಬೇಕು
- ಜಮೀನಿನ ಮಾಲೀಕತ್ವದ ದಾಖಲೆಗಳು ಅಥವಾ ಮಾನ್ಯತೆ ಪಡೆದ ಬಾಡಿಗೆ ಒಪ್ಪಂದದ ಪತ್ರ ಇರಬೇಕು
- ಅರ್ಜಿದಾರರು ಕನಿಷ್ಠ ಒಂದು ವರ್ಷದಿಂದ ಪ್ರಸ್ತುತ ನಗರದ ನಿವಾಸಿ ಆಗಿರಬೇಕು
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ವೋಟರ್ ಐಡಿ
- ಡ್ರೈವಿಂಗ್ ಲೈಸನ್ಸ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಜಮೀನು ಬಾಡಿಗೆ ಪಡೆದ ಕರಾರು ಪತ್ರ
- ಜಮೀನು ಮಾಲಿಕತ್ವದ ಪ್ರಮಾಣ ಪತ್ರ
- ಆರ್ ಟಿ ಸಿ
- ಕೊನೆಯ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಉದ್ದೇಶಿತ ಕೃಷಿ ಯೋಜನೆಯ ವಿವರ
ಈ ಯೋಜನೆಯ ಪ್ರಯೋಜನಗಳು
- ಜೀರೋ ಪರ್ಸೆಂಟ್ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ ಒದಗಿಸುವುದು
- ಸುಲಭ ಮರುಪಾವತಿ ಸುಲಭ ಸಾಲವನ್ನು ತೀರಿಸಬಹುದು
- ಕೃಷಿ ಚಟುವಟಿಕೆಗಳಲ್ಲಿ ಅಭಿವೃದ್ಧಿ ಹೊಂದಲು ಬೀಜ ಗೊಬ್ಬರ ನೀರಾವರಿ ವ್ಯವಸ್ಥೆಗಳ
- ಸಣ್ಣ ರೈತರಿಗೆ ಹಾಗೆ ಹಿಂದುಳಿದ ರೈತರಿಗೆ ಇದು ಆರ್ಥಿಕ ಸಹಾಯವಾಗುತ್ತೆ
ಅರ್ಜಿ ಸಲ್ಲಿಸುವ ವಿಧಾನ
- ನಿಮ್ಮ ಹತ್ತಿರದ ಸಹಕಾರಿ ಬ್ಯಾಂಕ್ ಶಾಖೆ ಅಥವಾ ಕಾಮನ್ ಸೆರ್ವಿಸ್ ಸೆಂಟರ್ ಗೆ ಭೇಟಿ
- ನೀಡಿ ಕೆಸಿಸಿ ಅರ್ಜಿ ಫಾರ್ಮನ್ನ ಪಡೆದು ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ
- ಭರ್ತಿ ಮಾಡಿದ ಫಾರ್ಮ್ ಜೊತೆಗೆ ಅಗತ್ಯ ದಾಖಲೆಗಳ ಪ್ರತಿಗಳನ್ನು ಜೋಡಿಸಿ
- ಬ್ಯಾಂಕ್ ಅಧಿಕಾರಿ ನೀಡಿದ ದಾಖಲೆಗಳನ್ನು ಪರಿಶೀಲಿಸಿ
- ಅನುಮೋದನೆಯ ನಂತರ ನಿಮ್ಮ ಖಾತೆಗೆ ಸಾಲದ ಮತ ಜಾಮೆ ಮಾಡಲಾಗುತ್ತೆ.
- ಇದಕ್ಕೆ ನೀವು ಕೃಷಿ ಸಹಕಾರ ಪತ್ತಿನ ಬ್ಯಾಂಕುಗಳಲ್ಲಿ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ತೀರ್ಮಾನ
ರೈತರಿಗೆ 0% ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಒದಗಿಸುವಂತಹ ಉತ್ತಮ ಆರ್ಥಿಕ ಅವಕಾಶ ಇದರ ಸದುಪಯೋಗವನ್ನು ರೈತರು ಪಡಿಸಿಕೊಂಡು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬಹುದು.