ಪರಿಚಯ :-
ಕರ್ನಾಟಕ ಸರ್ಕಾರವು ಹಿಂದುಳಿದ ವರ್ಗದ ಅಭಿವೃದ್ಧಿಗೆ ಡಾ ಬಿ ಆರ್ ಅಂಬೇಡ್ಕರ್ ನಿಗಮದ (Dr. B R Ambedkar Development Corporation Ltd) ವತಿಯಿಂದ ವಿವಿಧ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಯೋಜನೆಯನ್ನು ಜಾರಿಗೆ ತಂದಿದೆ. 2025 -26 ರ ಸಾಲಿಗೆ ವಿವಿಧ ಸಾಲ ಸೌಲಭ್ಯ ಯೋಜನೆಯನ್ನು ಪಡೆಯಲು ಬೇಕಾಗುವ ದಾಖಲೆಗಳು ಹಾಗೂ , ಈ ಯೋಜನೆಗೆ ಬೇಕಾಗಿರುವ ಅರ್ಹತೆಗಳು , ಮತ್ತು ಈ ಯೋಜನೆಯ ಮುಖ್ಯ ಉದ್ದೇಶ , ಈ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸಾಲಸೌಲಭ್ಯ ಯೋಜನೆಯ ಮುಖ್ಯ ಉದ್ದೇಶ :-
- ಸ್ವಯಂ ಉದ್ಯೋಗ ನಡೆಸಲು ಸಾಲ ಸೌಲಭ್ಯ
- ಕರ್ನಾಟಕದ ಪರಿಶಿಷ್ಟ ಜಾತಿ (SC) ಸಮುದಾಯವನ್ನು ಆರ್ಥಿಕವಾಗಿ ಸದೃಢ ಮಾಡುವುದು
- ಸ್ವಂತ ಉದ್ಯೋಗ ಮಾಡಲು ಪ್ರೋತ್ಸಹ
- ಜಮೀನು ಖರೀದಿಗೆ ಪ್ರೋತ್ಸಹ
- ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ
ಯೋಜನೆಗಳು ಮತ್ತು ಸಾಲ ಸೌಲಭ್ಯಗಳು :-
- ಸ್ವಯಂ ಉದ್ಯೋಗ ನಡೆಸಲು ನೇರ ಸಾಲ ಸೌಲಭ್ಯ
- ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ
- ಸ್ವಾವಲಂಬಿ ಸಾರಥಿ ಯೋಜನೆ
- ಮೈಕ್ರೋ ಕ್ರೆಡಿಟ್ ಯೋಜನೆ
- ಭೂ ಒಡೆತನ ಯೋಜನೆ
- ಗಂಗಾ ಕಲ್ಯಾಣ ಯೋಜನೆ
ಯೋಜನೆಯ ವಿವರ :-
1. ಸ್ವಯಂ ಉದ್ಯೋಗ ನಡೆಸಲು ನೇರ ಸಾಲ ಸೌಲಭ್ಯ :-
1ಲಕ್ಷದ ವರೆಗೆ ಸ್ವಂತ ಉದ್ಯೋಗ ನಡೆಸಲು ಸಾಲ ನೀಡಲಾಗುತ್ತದೆ ಮತ್ತು ಈ ಯೋಜನೆಯಡಿಯಲ್ಲಿ 50% ಅಂದರೆ ₹50 ಸಾವಿರ ಸಬ್ಸಿಡಿ ಸಹ ಸಿಗುತ್ತದೆ.
ಇನ್ನುಲಿದ 50 ಸಾವಿರ ಹಣಕ್ಕೆ 4% ಬಡ್ಡಿದರ ನಿಗದಿಮಾಡಿ ಸಾಲವನ್ನು ವಿತರಿಸಲಾಗುತ್ತದೆ.
2. ಉದ್ಯಮ ಶೀಲತಾ ಅಭಿವೃದ್ದಿ ಯೋಜನೆ :-
ಈ ಯೋಜನೆಯಡಿಯಲ್ಲಿ ಸ್ವಂತ ಉದ್ಯಮ ಮಾಡುವ ಕನಸು ಹೋಂದಿದವರಿಗೆ 2ಲಕ್ಷದವರೆಗೆ ಬ್ಯಾಂಕ್ ಮೂಲಕ ನೇರವಾಗಿ ಸಾಲವನ್ನು ನೀಡಲಾಗುತ್ತದೆ.
3. ಸ್ವಾವಲಂಬಿ ಸಾರಥಿ ಯೋಜನೆ :-
ವಾಹನ ಖರಿದಿ ಮಾಡುವವರಿಗೆ 4 ಲಕ್ಷದವರಗೆ 75% ಸಹಾಯಧನದೊಂದಿಗೆ ಹಣವನ್ನು ನೀಡಲಾಗುತ್ತದೆ ಈ ಯೋಜನೆಗೆ ಬೇಕಾದ ದಾಖಲೆಯನ್ನು ಸಿದ್ದಪಡಿಸಿಟ್ಟುಕೋಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
4.ಮೈಕ್ರೋ ಕ್ರೆಡಿಟ್ ಯೋಜನೆ :-
ಕನಿಷ್ಟ 10 ಜನ ಸದಸ್ಯರನ್ನು ಹೊಂದಿದ ಮಹಿಳಾ ಸ್ವಸಹಾಯ ಗುಂಪುಗಳಿಗೆ 2.5 ಲಕ್ಷ ಹಣವನ್ನು ನೀಡಲಾಗುತ್ತೆ ಇದಕ್ಕೆ 1.5 ಲಕ್ಷ ಸಹಾಯಧನ ಸಿಗಲಿದೆ ಇನ್ನುಳಿದ 1 ಲಕ್ಷಕ್ಕೆ 4% ಬಡ್ಡಿದರ ನಿಗದಿಪಡಿಸಲಾಗಿದೆ.
5. ಭೂ ಒಡೆತನ ಯೋಜನೆ :-
ಭೂಮಿ ಇಲ್ಲದ ಮಹಿಳಾ ಕೃಷಿಕಾರ್ಮಿಕರಿಗೆ 25ಲಕ್ಷ 50% ಸಬ್ಸಿಡಿಯೊಂದಿಗೆ ನೀಡಲಾಗುತ್ತೆ ಇನ್ನುಳಿದ 50% ಹಣಕ್ಕೆ 6% ಬಡ್ಡಿಯನ್ನು ನಿಗದಿಪಡಿಸಿ ಸಾಲವನ್ನು ವಿತರಿಸಲಾಗುತ್ತದೆ.
6. ಗಂಗಾ ಕಲ್ಯಾಣ ಯೋಜನೆ :-
ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೋಳವೆ ಬಾವಿ ತೆಗಿಸಲು ಮತ್ತು ಪಂಪ್ ಸೆಟ್ ಅಳವಡಿಸಲು 4.75 ಲಕ್ಷ ವಿತರಿಸಲಾಗುತ್ತದೆ . ಇದರಲ್ಲಿ 50 ಸಾವಿರ ಸಾಲ ಸೇರಿದೆ.
ಬೇಕಾಗುವ ದಾಖಲೆಗಳು:-
- SC ಪ್ರಮಾಣ ಪತ್ರ
- ಆಧಾರ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ವೊಟರ್ ಐಡಿ
- ರೇಷನ್ ಕಾರ್ಡ್
ಅರ್ಜಿ ಸಲ್ಲಿಸುವ ವಿಧಾನ:-
ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಬ್ಯಾರ್ಥಿಗಳು ಸಂಬಧಿಸಿದ ದಾಖಲೆಗಳೋಂದಿಗೆ ಆನ್ ಲೈನ್ ಮುಲಕ ಅರ್ಜಿ ಸಲ್ಲಿಸಬಹುದು .
Join Telegram Channel | Join Now |
Join Whatsapp Channel | Join Now |
Official Website | Click Here |
Official Notification Link | Download Now |