street light subsidy : ಕರ್ನಾಟಕದಲ್ಲಿ ಉಚಿತ ಸೌರ ಬೀದಿ ದೀಪಗಳ ಯೋಜನೆಯನ್ನು ಜಾರಿಗೆ ತರಲಾಗಿದೆ ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಸೌರ ಬೀದಿ ದೀಪಗಳನ್ನು ಉಚಿತವಾಗಿ ಕೊಡುವ ಯೋಜನೆಯನ್ನು ಜಾರಿಗೆ ತಂದಿದ್ದು ನೀವು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
ಈ ಯೋಜನೆಯ ಉದ್ದೇಶ
ಈ ಯೋಜನೆಯ ಉದ್ದೇಶದ ಬಗ್ಗೆ ನೋಡೋದಾದ್ರೆ ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ ಹಾಗೂ ವಿದ್ಯುತ್ ಸೌಲಭ್ಯ ಇಲ್ಲದ ಪ್ರದೇಶದಲ್ಲಿ ಸೌರ ವಿದ್ಯುತ್ ಫಲಕ ಅಳವಡಿಸುವ ಮೂಲಕ ಆ ಪ್ರದೇಶಕ್ಕೆ ವಿದ್ಯುತ್ ಸಂಪರ್ಕವನ್ನು ತಲುಪಿಸುವ ಸರ್ಕಾರದ ಗುರಿ ಇದಾಗಿದೆ.
ಈ ಯೋಜನೆಗೆ ಅರ್ಹತೆ
ಗ್ರಾಮ ಪಂಚಾಯಿತಿಗಳು ನಗರ ಸ್ಥಳೀಯ ಪ್ರದೇಶಗಳು, ಧಾರ್ಮಿಕ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಸಹಕಾರಿ ಸಂಘಗಳು, ಐತಿಹಾಸಿಕ ಸ್ಥಳಟ್ರಸ್ಟ್ ಗಳು ಈ ಯೋಜನೆಯ ಅರ್ಹತೆಯನ್ನು ಪಡೆದುಕೊಳ್ಳಬಹುದು.
ವಿಧಾನ
ಈ ಯೋಜನೆಯ ಮೂಲಕ ಸರ್ಕಾರದಿಂದ ಉಚಿತವಾಗಿ ಮನೆ ಮನೆಗಳಿಗೆ ಸಿಗ್ತಿರುವಂತದ್ದು. ತಮ್ಮ ಮನೆಗಳಿಗೆ ಬೀದಿದೀಪ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ಜನಸಾಮಾನ್ಯರ ಹಕ್ಕು.
ತಮ್ಮ ಊರಿನ ಗ್ರಾಮಪಂಚಾಯಿತಿಯಲ್ಲಿ ನೀವು ಕೇಳಿ ಪಡೆಯಬಹುದು. ಬೀದಿದೀಪ ಅಳವಡಿಕೆಯ ನಂತರ ಯಾವುದೇ ಸಮಸ್ಯೆ ಬಂದೆರೆ ನಿಮ್ಮ ಊರಿನ ಗ್ರಾಮ ಪಂಚಾಯಿತಿಯ ಮೂಲಕ ಪರಿಹಾರ ಮಾಡೆಯಬಹುದಾಗೋದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಸಂಸ್ಥೆಯ ನೊಂದಣಿ ಪ್ರಮಾಣ ಪತ್ರ
- ಸ್ಥಳ ವಿವರ
- ಜಮೀನು ದಾಖಲೆಗಳು
- ಪ್ರಾಜೆಕ್ಟ್ ರಿಪೋರ್ಟ್
- ಬ್ಯಾಂಕ್ ಪಾಸ್ ಬುಕ್
- ಆಧಾರ್ ಕಾರ್ಡ್
- ಪಾನ್ ಕಾರ್ಡ್ ಫೋಟೋ
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಕೆಆರ್‌ಇಡಿಎಲ್ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸಿದ ಬಳಿಕ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಎಲ್ಲಾ ಸರಿಯಾಗಿದ್ದರೆ ಈ ಯೋಜನೆಗೆ ಅರ್ಹತೆಯನ್ನು ಪಡೆಯುತ್ತೀರಾ ಕೆ ಆರ್ ಇ ಡಿ ಎಲ್ ರಿಂದ ಅನುಮೋದಿತ ಸರಬರಾಜುದಾರರ ಪಟ್ಟಿಯನ್ನು ಪ್ರಕಟ ಮಾಡಲಾಗುತ್ತೆ.
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ
ಈ ಕೆಳಗಿನ ಸಹಾಯವಾಣಿ ನಂಬರಿಗೆ ಕರೆ ಮಾಡಬಹುದು ಅಥವಾ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ನಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.