ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಫುಲ್ ಮಾಹಿತಿ .. । Labour Scholarship | Student


Labour Scholarship : ವೀಕ್ಷಕರೆ ಎಲ್ಲರಿಗೂ ನಮಸ್ಕಾರ….. ಕಾರ್ಮಿಕರ ಇಲಾಖೆಯ ವತಿಯಿಂದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಕೊಡುತ್ತಿದ್ದಾರೆ ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ಕೆಲವೊಂದಿಷ್ಟು ಅರ್ಹತೆಗಳು ಬೇಕು ಈ ಅರ್ಹತೆಗಳು ಯಾವುವು, ಅರ್ಜಿ ಸಲ್ಲಿಸುವ ದಿನಾಂಕ ಯಾವುದು, ಇದಕ್ಕೆ ಬೇಕಾಗಿರುವಂತಹ ದಾಖಲೆಗಳು ಯಾವುವು, ಈ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಕೆಳಗೆ ನೀಡಲಾಗಿದೆ ನೀವು ವಿದ್ಯಾರ್ಥಿಯಾಗಿದ್ದರೆ ನಿಮಗೂ ಕೂಡ ಈ ಸ್ಕಾಲರ್ಶಿಪ್ ಬೇಕು ಅಂದರೆ ಈ ಮಾಹಿತಿನ ಪೂರ್ತಿಯಾಗಿ ಕೊನೆತನಕ ನೋಡಿ ಹಾಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಮಾಹಿತಿಯನ್ನ ಎಲ್ಲರಿಗೂ ಶೇರ್ ಮಾಡಿ.

ಈ ಯೋಜನೆಯ ಉದ್ದೇಶ

ಕರ್ನಾಟಕ ರಾಜ್ಯದ ಹಿಂದುಳಿದ ಹಾಗೂ ಬಡ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣವನ್ನ ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರ ಕಾರ್ಮಿಕರ ಇಲಾಖೆಯಿಂದ ಈ ಒಂದು ಯೋಜನೆಯ ಜಾರಿಗೆ ತರಲಾಗಿದೆ.

ಯೋಜನೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಅವರ ಭವಿಷ್ಯವನ್ನು ರೂಪಿಸುವ ದೃಷ್ಟಿಯಿಂದ ಸರ್ಕಾರದ ವತಿಯಿಂದ ಸಹಾಯಧನವನ್ನು ನೀಡುತ್ತಿದ್ದಾರೆ ಈ ಸಹಾಯಧನವನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮಗೆ ಬೇಕಾದ ವಸ್ತುಗಳನ್ನ ಖರೀದಿ ಮಾಡಬಹುದು ಇದು ವಿದ್ಯಾರ್ಥಿಗಳಿಗೆ ಒಂದು ರೀತಿಯಾದ ಆರ್ಥಿಕ ನೆರವು ಸರಕಾರದಿಂದ ಸಿಗುತ್ತಿರುವಂತದ್ದು ಇದರಿಂದ ಅವರ ಉನ್ನತ ಶಿಕ್ಷಣಕ್ಕೂ ಹಾಗೂ ಪ್ರಸ್ತುತ ಓದುತ್ತಿರುವ ಶಿಕ್ಷಣಕ್ಕೆ ಇದು ಸಹಾಯವಾಗುತ್ತದೆ.

ಯೋಜನೆಗೆ ಅರ್ಹತೆ

ಈ ಯೋಜನೆಯ ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ಅರ್ಹತೆ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ ಕಾರ್ಮಿಕರ ಮಕ್ಕಳಾಗಿರಬೇಕು

  • ಕಾರ್ಮಿಕರ ಕಾರ್ಡನ್ನ ಹೊಂದಿರಬೇಕು
  • ರೇಷನ್ ಕಾರ್ಡ್ ಹೊಂದಿರಬೇಕು
  • ಹಿಂದುಳಿದ ವರ್ಗದ ಬಡ ಕುಟುಂಬದ ವಿದ್ಯಾರ್ಥಿಗಳು ಹಾಗೂ ಶಾಲೆಯ ಅಥವಾ ಕಾಲೇಜು ದಾಖಲಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಪಾಸ್
  • ಬುಕ್ ಪಾಸ್ಪೋರ್ಟ್
  • ಫೋಟೋ
  • ಶಾಲಾ ದಾಖಲಾತಿ ಪ್ರಮಾಣ ಪತ್ರ

ಇನ್ನಿತರ ದಾಖಲೆಗಳನ್ನು ಹೊಂದಿರುವ ಅಭ್ಯರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :-

ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಒದಿಕೊಂಡು ಕೊಟ್ಟಿರುವ ಮಾಹಿತಿಯನ್ನು ಭರ್ತಿ ಮಾಡಿ ಹಾಗೂ ಸಂಬಂಧ ಪಟ್ಟ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಹಣ ವರ್ಗಾವಣೆ ಮಾಡುವ ವಿಧಾನ

ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ ಅಪ್ಲೋಡ್ ಮಾಡಿದ ನಂತರ ನಿಮಗೆ ಕೊನೆಯದಾಗಿ ವೆರಿಫಿಕೇಶನ್ ಮುಗಿದ ನಂತರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಸಂದಾಯ ಮಾಡಲಾಗುತ್ತದೆ.


ಇದನ್ನು ಓದಿರಿ :- PM ವಿದ್ಯಾರ್ಥಿವೇತನ ಯೋಜನೆ (PMSS) ಹುಡುಗರಿಗೆ ₹2500/- ಹುಡುಗಿಯರಿಗೆ ₹3000/-

Leave a Comment