ಕೃಷಿ ಜಮೀನಿಗೆ ದಾರಿ ಇಲ್ಲದ ರೈತರಿಗೆ ಸಿಹಿ ಸುದ್ದಿ! ಹೊಸ ಕಾನೂನು ! Land Road


ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಜಮೀನುಗಳಿಗೆ ಪ್ರವೇಶಿಸಲು ಕೃಷಿ ಸಲಕರಣೆಗಳನ್ನು ಸಾಗಿಸಲು ಮತ್ತು ಬೆಳೆದ ಪಸಲನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಕಾಲುದಾರಿ ಮತ್ತು ಬಂಡಿದಾರಿಗಳನ್ನ ಅವಲಂಬಿಸಿರುತ್ತಾರೆ. ಆದರೆ ಈ ದಾರಿಗಳು ಸಾಮಾನ್ಯವಾಗಿ ಇತರ ಖಾಸಗಿ ಜಮೀನುಗಳ ಮೂಲಕ ಹಾದು ಹೋಗುವುದರಿಂದ ಆ ಭೂ ಮಾಲೀಕರು ವೈಯಕ್ತಿಕ ದ್ವೇಷ ಅಥವಾ ಹೊಂದಾಣಿಕೆಯ ಕೊರತೆಯಿಂದಾಗಿ ದಾರಿಗಳನ್ನ ಮುಚ್ಚಿಡುವುದು ಅಥವಾ ಬಳಕೆಗೆ ಅಡ್ಡಿಪಡಿಸುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದಾಗಿ ರೈತರು ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತೊಂದರೆಯಾಗುತ್ತಿದೆ ಇದನ್ನ ಮನಗಂಡ ಸರ್ಕಾರ ಇದೀಗ ಹೊಸ ಆದೇಶವನ್ನು ರೂಪಿಸಿದೆ.

ಉದ್ದೇಶ :-

ರೈತರು ಅಕ್ಕಪಕ್ಕ ಜಮೀನಿನವರೊಂದಿಗೆ ಜಂಜಾಟದ ಜೀವನ ನಡೆಸಿ ಜಗಳ ಹೊಡೆದಾಟ ಬಡದಾಟ ಯುಗಳಿಂದ ತಪ್ಪಿಸಲು ಸರ್ಕಾರ ತೆಗೆದುಕೊಂಡಿರುವ ಒಂದು ಪ್ರಮುಖ ಕ್ರಮ ಇದಾಗಿದೆ

ಸರ್ಕಾರದ ಹೊಸ ಆದೇಶ ಮತ್ತು ಕ್ರಮ

ಈ ಸಮಸ್ಯೆಯನ್ನ ಗಂಭೀರವಾಗಿ ತೆಗೆದುಕೊಂಡಿರುವಂತಹ ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ಏಪ್ರಿಲ್ 25ರಂದು ಒಂದು ಮಹತ್ವದ ಸುತ್ತೋಲೆಯನ್ನು ಜಾರಿಗೆ ತಂದಿರುವುದು ಯಾವುದೇ ಖಾಸಗಿ ಭೂ ಮಾಲೀಕರು ರೈತರು ತಮ್ಮ ಜಮೀನಿಗೆ ಪ್ರವೇಶಿಸಲು ಬಳಸುವ ಗ್ರಾಮ ನಕಾಶೆಯಲ್ಲಿ ಗುರುತಿಸಲಾದ ಕಾಲುದಾರಿ ಬಂಡಿದಾರಿ ಅಥವಾ ರಸ್ತೆಗಳನ್ನು ಮುಚ್ಚಲು ಅಥವಾ ಅಡ್ಡಿಪಡಿಸಲು ಅವಕಾಶ ಇಲ್ಲ ಅದರ ಜೊತೆಗೆ ಅಡ್ಡಿಪಡಿಸಿದ್ದನ್ನ ಕಂಡಲ್ಲಿ ತಾಲೂಕಿನ ತಾಸಿಲ್ದಾರರು ದಕ್ಷಿಣ ಕ್ರಮವನ್ನು ಕೈಗೊಂಡು ಆ ದಾರಿಯನ್ನು ತೆರವುಗೊಳಿಸಬೇಕು ಎಂದು ಹೇಳಲಾಗಿದೆ.

ದಾರಿ ಹಕ್ಕಿಗೆ ಸಂಬಂಧಿಸಿದ ಕಾನೂನು ಚೌಕಟ್ಟು

ರೈತರ ತಮ್ಮ ಹೊಲಗದ್ದೆ ಗಳಿಗೆ ತೆರಳಲು ದಾರಿಗಳನ್ನ ಪಡೆದುಕೊಳ್ಳಲು ಕಾನೂನಿನ ಚೌಕಟ್ಟಿನ ಅಡಿ ಅವಕಾಶ ಇದೆ ಕರ್ನಾಟಕ ಭೂ ಕಂದಾಯ ನಿಯಮಗಳ ಪ್ರಕಾರ ಈ ದಾರಿಗಳನ್ನ ನೀವು ಬಿಡಿಸಿಕೊಳ್ಳಬಹುದು ಭಾರತೀಯ ದಂಡ ಸಂಹಿತೆ ಪ್ರಕಾರ ಈ ಎಲ್ಲಾ ರೀತಿಯಾದ ಕಾನೂನಿನ ಅವಕಾಶಗಳು ಇರುವಂತದ್ದು ರೈತರು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದರೆ ನಿಮಗೆ ದಾರಿ ಸರ್ಕಾರದಿಂದ ಮಾಡಿಕೊಳ್ಳಲಾಗುತ್ತೆ.

ತಹಶೀಲ್ದಾರರ ಪಾತ್ರ ಮತ್ತು ಕ್ರಮಗಳು

ತಾಲೂಕಿನ ತಾಶಿಲ್ದಾರರು ಅತ್ಯಂತ ಪ್ರಮುಖ ಪಾತ್ರ ಇದಕ್ಕೆ ವಹಿಸುತ್ತಾರೆ ಗ್ರಾಮ ನಕಾಶೆಯನ್ನು ಪರಿಶೀಲಿಸಿ ಅಲ್ಲಿ ಗುರುತಿಸಲಾದ ಸಾರ್ವಜನಿಕ ದಾರಿಗಳನ್ನ ನಿರ್ಧರಿಸಬೇಕಾಗುತ್ತದೆ ಯಾರಾದರೂ ಭೂಮಾಲೀಕರು ದಾರಿಗಳನ್ನ ಮುಚ್ಚಿದರೆ ಅಥವಾ ಅಡ್ಡಿಪಡಿಸಿದರೆ ಅವರಿಗೆ ನಿವಾರಣೆಯ ನೋಟಿಸನ್ನು ನೀಡಬೇಕು ಅವರ ದಾರಿಯನ್ನು ತೇರುಗೊಳಿಸಬಹುದು.

ರೈತರು ತೆಗೆದುಕೊಳ್ಳಬೇಕಾದ ಕ್ರಮಗಳು


ಸ್ಥಳೀಯ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಬೇಕು ಗ್ರಾಮ ಪಂಚಾಯಿತಿ ಸದಸ್ಯರು ಅಥವಾ ತಾಸಿಲ್ದಾರ್ ಕಚೇರಿಗಳಿಗೆ ದೂರು ನೀಡಿ ಗ್ರಾಮ ನಕಾಶೆಯಲ್ಲಿ ದಾರಿ ಇದೆ ಎಂಬುದರ ಸಾಕ್ಷಿ ಇದ್ದರೆ ಅದನ್ನು ಒದಗಿಸಲು ಪ್ರಯತ್ನಿಸಬೇಕು ಕಾನೂನು ಸಹಾಯವನ್ನು ಪಡೆದು ಈ ಒಂದು ದಾರಿಯನ್ನ ಬಿಡಿಸಿಕೊಳ್ಳಬಹುದು.

ರೈತರಿಗೆ ಸಲಹೆಗಳು ಮತ್ತು ಎಚ್ಚರಿಕೆಗಳು

ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಬೇಕು

ದಾಖಲೆಗಳನ್ನು ಸುರಕ್ಷಿತವಾಗಿರಬೇಕು

ಸರ್ಕಾರಿ ಯೋಜನೆಗಳ ಬಗ್ಗೆ ತಿಳಿದಿರಬೇಕಾಗುತ್ತದೆ

ರೈತರು ತಮ್ಮ ಅಕ್ಕಪಕ್ಕದ ಜಮೀನಿನ ರೈತರೊಂದಿಗೆ ಪರಸ್ಪರ ಹೊಂದಾಣಿಕೆಯಿಂದ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು.

ಸಾರಾಂಶ

ರೈತರ ಜಮೀನಿನ ಪ್ರವೇಶ ಮತ್ತು ದಾರಿ ಹಕ್ಕುಗಳ ಸಮಸ್ಯೆ ಬಹುಕಾಲದಿಂದಲೂ ಇರುವಂತಹ ಸಮಸ್ಯೆಯಾಗಿದೆ ಆದರೆ ಕರ್ನಾಟಕ ಸರ್ಕಾರದ ಹೊಸ ಸುತ್ತೋಲೆ ಪ್ರಕಾರ ಕಾನೂನಿನ ಚೌಕಟ್ಟು ಈ ಸಮಸ್ಯೆಯನ್ನು ಪರಿಹರಿಸಲು ಸಹಕಾರಿಯಾಗಿದೆ ರೈತರ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ಅದನ್ನು ದಾಖಲಿಸಿಕೊಂಡು ಘರ್ಷಣೆ ಉಂಟಾದಲ್ಲಿ ಸಹಾಯ ಪಡೆದು ಅವರ ಮೂಲಕ ಈ ದಾರಿಗಳನ್ನು ಬಿಡಿಸಿಕೊಳ್ಳಬಹುದು.

Leave a Comment