ಕೇಂದ್ರ ಸರ್ಕಾರವು ಉದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಯನ್ನು ಜಾರಿಗೆ ತರುತ್ತಿದೆ ಅದರಲ್ಲಿ ಈ ಒಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸಹ ಒಂದು ಈ ಯೋಜೆನೆಯನ್ನು ಯಾರೆಲ್ಲ ಪಡೆಯಬಹುದು, ಮುದ್ರಾ ಲೋನ್ ಪಡೆಯುವುದು ಹೇಗೆ ಈ ಎಲ್ಲ ಮಾಹಿತಿಯನ್ನು ಈ ಕೆಳಗೆ ಹಂತ ಹಂತವಾಗಿ ತಿಳಿಸಲಾಗಿದೆ. ಹಾಗೆ ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಶೀಘ್ರವಾಗಿ ಪಡೆಯಲು ಕೆಳಗೆ ಕಾಣಿಸುವ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ….
How To Apply Mudra Loan In Kannada :-
ಮುದ್ರಾ ಲೋನ್ ಪಡೆಯುವುದು ಹೇಗೆ? ತುಂಬಾ ಜನಕ್ಕೆ ಒಂದು ಹೊಸ ಬ್ಯುಸಿನೆಸ್ ಮಾಡಿ ಅದ್ರಿಂದ ಒಳ್ಳೆ ಸಂಪಾದನೆ ಮಾಡಿ ಲೈಫ್ ಅಲ್ಲಿ ಸಕ್ಸಸ್ ಆಗ್ಬೇಕು ಅನ್ಕೊಂಡಿರ್ತರೆ ಆದ್ರೆ ಅವರಿಗೆ ಬಿಸಿನೆಸ್ ಶುರು ಮಾಡಲು ಬಂಡವಾಳ ಇರೋದಿಲ್ಲ ಇಂತವರಿಗೆ ಸಾಲ ಸೌಲಭ್ಯದ ಅವಶ್ಯಕತೆ ತುಂಬಾನೇ ಇರುತ್ತದೆ ಹಾಗಾಗಿ ಇವರು ಸಾಲ ಮಾಡಲು ಮುಂದಾಗುತ್ತಾರೆ ಸಾಕಷ್ಟು ಕಡೆ ಪಡೆದ ಸಾಲಕ್ಕೆ ಬಡ್ಡಿ ಸಹ ಹೆಚ್ಚಿರುತ್ತದೆ ಇದರಿಂದ ಇವರು ಇನ್ನಷ್ಟು ಸಾಲಗಾರರಾಗುತ್ತಾರೆ.
ಇದನ್ನು ಗಮನ ಹರಿಸಿದ ಸರ್ಕಾರ ಪ್ರತಿಯೊಬ್ಬರು ಸ್ವಂತ ಉದ್ಯಮವನ್ನು ಶುರುಮಾಡಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕಡಿಮೆ ಬಡ್ಡಿ ದರದಲ್ಲಿ ಹಾಗೂ ಸಬ್ಸಿಡಿ ದರದಲ್ಲಿ ಮುದ್ರಾ ಸಾಲವನ್ನು ಬ್ಯುಸಿನೆಸ್ ಶುರು ಮಾಡಲು ಕೊಡಬೇಕು ಎಂದು ನಿರ್ಧರಿಸಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಮುದ್ರಾ ಲೋನ್ ಪಡೆಯಲು ಅರ್ಹತೆ :-
ಮುದ್ರಾ ಸಾಲವನ್ನು ಪಡೆಯಲು ಕೆಲವು ಅರ್ಹತೆ ಹೊಂದಿರಬೇಕು ಹಾಗಾದರೆ ಈ ಅರ್ಹತೆಗಳು ಯಾವುದು ಈ ಕೆಳಗೆ ಹಂತ ಹಂತವಾಗಿ ತಿಳಿಸಲಾಗಿದೆ.
- ನಿಮ್ಮ ವಯಸ್ಸು ಕನಿಷ್ಠ 18 ವರ್ಷದಿಂದ ಗರಿಷ್ಠ 65 ವರ್ಷದವರಾಗಿರಬೇಕು
- ಯಾವ ಉದ್ದೇಶಕ್ಕೆ ಸಾಲ ಪಡೆಯುವುದು ಅಂದರೆ ಸಣ್ಣ/ಸೂಕ್ಷ್ಮ ಉದ್ಯಮ (ವ್ಯಾಪಾರ, ಉತ್ಪಾದನೆ, ಸೇವಾ ಕ್ಷೇತ್ರ).
- ನಿಮ್ಮ ಕ್ರೆಡಿಟ್ ಸ್ಕೊರ್ ಕನಿಷ್ಠ 650 ಕ್ಕೂ ಹೆಚ್ಚು ಇರಬೇಕು.
ಮುದ್ರಾ ಯೋಜನೆಯ ಮೂರೂ ಹಂತಗಳು:-
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ 3 ಹಂತಗಳಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
- ಶಿಶು: ₹50,000 ವರೆಗೆ (ಹೊಸ ಉದ್ಯಮಿಗಳಿಗೆ).
- ಕಿಶೋರ: ₹50,001–₹5 ಲಕ್ಷ.
- ತರುಣ: ₹5 ಲಕ್ಷ–₹10 ಲಕ್ಷ.
- ತರುಣ ಪ್ಲಸ್ : ₹20 ಲಕ್ಷ.
ಬೇಕಾಗುವ ಅಗತ್ಯ ದಾಖಲೆಗಳು :-
ಈ ಕೆಳಗಿನ ದಾಖಲೆಯನ್ನು ಹೊಂದಿದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ಪಾಸ್ಪೋರ್ಟ್ ಗಾತ್ರದ ಫೋಟೋ
- ಪಾನ್ ಕಾರ್ಡ್
- ಆಧಾರ್ ಕಾರ್ಡ್
- ವ್ಯವಹಾರ ಪ್ರಮಾಣಪತ್ರ (GST/ವ್ಯಾಪಾರ ಲೈಸೆನ್ಸ್).
- ಬ್ಯಾಂಕ್ ಸ್ಟೇಟ್ಮೆಂಟ್ (6–12 ತಿಂಗಳು).
- ವ್ಯವಹಾರ ಯೋಜನೆ/ಆದಾಯದ ಪುರಾವೆ.
ಸಾಲಕ್ಕೆ ಬಡ್ಡಿದರ :-
7–15% (ಲೋನ್ ಪ್ರಕಾರ ಮತ್ತು ಸಂಸ್ಥೆಯನ್ನು ಅವಲಂಬಿಸಿ).
ಸಾಲ ಮಂಜೂರು ಪ್ರಕ್ರಿಯೆ :-
- ಅರ್ಜಿ ಪರಿಶೀಲನೆ ಮತ್ತು ದಾಖಲೆಗಳ ಪರಿಶೋಧನೆ.
- ಸಾಮಾನ್ಯವಾಗಿ 1-2 ವಾರಗಳಲ್ಲಿ ಲೋನ್ ಅನುಮೋದನೆ.
ಅರ್ಜಿ ಸಲ್ಲಿಸುವ ವಿಧಾನ :-
ಈ ಕೆಳಗೆ ತಿಳಿಸಲಾದ ಅಧಿಕೃತ ವೆಬಸೈಟ್ ಗೆ ಭೇಟಿನೀಡಿ ಅಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ವಿಶೇಷ ಸೂಚನೆ :-
ಸರಿಯಾದ ಬ್ಯಾಂಕ್/ಹಣಕಾಸು ಸಂಸ್ಥೆಯನ್ನು ಆಯ್ಕೆ ಮಾಡಿ ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗೆ ಮುದ್ರಾ ಹೆಲ್ಪ್ಲೈನ್: 1800 180 1111 ಅಥವಾ ನಿಮ್ಮ ಸ್ಥಳೀಯ ಬ್ಯಾಂಕ್ಗೆ ಸಂಪರ್ಕಿಸಿ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ.
ಇತರೆ ಸಂಬಂದಿಸಿದ ವಿಷಯಗಳು :-
-
ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20
PM Kisan Status ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರ ಆದ ವಾರಣಾಸಿಗೆ ಭೇಟಿ ನೀಡಿದ ವೇಳೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 20 ನೆೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ ..ಇದರಬಗ್ಗೆ ಈಗಾಗಲೇ ನರೇಂದ್ರ ಮೋದಿಯವರು ಪ್ರತಿಯೊಬ್ಬ ರೈತರ ಬ್ಯಾಂಕ್ ಅಕೌಂಟ್ ಗೆ ನೆರೆವಾಗಿ ಹಣ ಜಮಾ ಆಗುತ್ತೆ ಎಂದು ಹೇಳಿದ್ದರು ಅವರು ನುಡಿದಂತೆ ಈಗ ನಡೆದಿದ್ದಾರೆ. Join Telegram Channel 💬 Join Whatsapp Channel ಪಿಎಂ ಕಿಸಾನ್ 20 ನೇ ಕಂತು ರೈತರ…
-
ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..
Gold Rate Today , ದಿನದಿನದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿತ್ತು ಆದರೆ ಇಷ್ಟು ದಿನ ಬಂಗಾರದ ಬೆಲೆಯಲ್ಲಿ ಬಾರಿ ಏರಿಕೆ ನಡುವೆಯೇ ಇದೀಗ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಮಹಾಲಕ್ಷ್ಮಿಯರಿಗೆ ಸಿಗುತ್ತಿರುವ ದೊಡ್ಡ ಉಡುಗೊರೆ ಆಗಿದೆ ಹಾಗಾದರೆ ಎಷ್ಟು ಬೆಲೆ ಕಡಿಮೆ ಆಗಿದೆ ಎನ್ನುವುದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೋಡೋಣ ಬನ್ನಿ ಅದಕ್ಕಿಂತ ಮೊದಲು ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕಾಣಿಸುವ…
-
ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ದಿನದಿಂದ ದಿನಕ್ಕೆ ರೈತರರಿಗೆ ಸಂತಸದ ಸುದ್ದಿ ಅಡಿಕೆ ಬೆಳೆಗಾರರಿಗೆ ಸಿಗುತ್ತಾ ಇರುವುದು ಅದು ಏನು ಎಂದರೆ ಅಡಿಕೆ ಬೆಲೆಯಲ್ಲಿ ಬಾರಿ ಏರಿಕೆ ಆಗುವ ಎಲ್ಲ ನಿರೀಕ್ಷೆ ಇದ್ದು ಇವತ್ತಿನ ಅಂದರೆ ದಿನಾಂಕ 01/08/2025 ರಂದು ಶಿವಮೊಗ್ಗದಲ್ಲಿ ಆಡಿಕೆ ಬೆಲೆ ಎಷ್ಟಿದೆ ಹಾಗೂ ಸಾಗರ , ಹೊಸನಗರ , ಇನ್ನಿತರ ಸ್ಥಳದಲ್ಲಿ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ… ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ…