Bele samikshe 2025 : ರೈತರಿಗೆ ಇಲ್ಲಿದೆ ಗುಡ್ ನ್ಯೂಸ್ :- 2025-26 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ನಡೆಸಲು ರೈತರಿಗೆ ಕೃಷಿ ಇಲಾಖೆ ಸೂಚಿಸಿದೆ.
ರೈತರು ಈ ಸಮೀಕ್ಷೆಯನ್ನು ನಡೆಸಲು ಬೇರೆ ಎಳ್ಳು ಹೋಗಬೇಕಾಗಿಲ್ಲ ತಮ್ಮ ಸ್ಮಾರ್ಟ್ ಫೋನ್ ನಲ್ಲೆ ಸಮೀಕ್ಷೆ ಮಾಡಿಕೊಳ್ಳಬಹುದು.
ಬೆಳೆ ಸಮೀಕ್ಷೆಯಲ್ಲಿ ರೈತರು ನೇರವಾಗಿ ಭಾಗಿ ಆಗಿ ಸಮೀಕ್ಷೆ ನಡೆಸಲು ಅವಕಾಶ ಕೊಟ್ಟಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.
ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್..?
ರೈತರು ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲಿ ಫೋಟೋ ತೆಗೆದು ಅಪ್ಲೋಡ್ ಮಾಡಲು ನಿಮ್ಮ ಹತ್ತಿರ ಸ್ಮಾರ್ಟ್ ಫೋನ್ ಇರಬೇಕಾಗುತ್ತದೆ .
ಸ್ಮಾರ್ಟ್ ಫೋನ್ ಇದ್ದರೆ ಪ್ಲೇಸ್ಟೋರ್ ಯಾಪ್ ಮೂಲಕ ಮುಂಗಾರು ರೈತರ ಬೆಳೆ ಸಮೀಕ್ಷೆ 2025 ಮೊಬೈಲ್ ಯಾಪ್ ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ನೀವು ಬೆಳೆದ ಬೆಳೆಯ ಫೋಟೋ ತೆಗೆದು ಬೆಳೆ ವಿವರವನ್ನು ದಾಖಲಿಸಿ ಅಪ್ಲೋಡ್ ಮಾಡಬಹುದು.
ರೈತರ ಬಳಿ ಸ್ಮಾರ್ಟ್ ಫೋನ್ ಇಲ್ಲ ಅಂದರೆ ಅಥವಾ ಅಪ್ಲೋಡ್ ಮಾಡಲು ಸಾಧ್ಯವಾಗದ ಸಮಯದಲ್ಲಿ ತಾಲೂಕು ಆಡಳಿತ ನೇಮಿಸಿರುವ ಮೊಬೈಲ್ ತಂತ್ರಾಂಶ ಜ್ಞಾನವುಳ್ಳ ಸ್ಥಳೀಯ ಖಾಸಗಿ ನಿವಾಸಿಯ ಸಹಾಯದಿಂದ ಮೊಬೈಲ್ ತಂತ್ರಾಂಶದಿಂದ ಬೆಲೆ ವಿವರವನ್ನು ಫೋಟೋ ತೆಗೆದು ಅಪ್ಲೋಡ್ ಮಾಡಿಸಿಕೊಳ್ಳಬಹುದು.
ಒಂದುವೇಳೆ ತಾಂತ್ರಿಕ ಸಮಸ್ಯೆ ಕಂಡುಬಂದರೆ ರೈತರು ನೇರವಾಗಿ ತಮ್ಮ ಆಕ್ಷೇಪಣೆಯನ್ನು “ಬೆಳೆ ದರ್ಶಕ ” ಮೊಬೈಲ್ ಯಾಪ್ ನಲ್ಲಿ ದಾಖಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಸಮೀಕ್ಷೆಯ ವಿವರವನ್ನು ತಿಳಿಯಲು ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ.
ವಿಶೇಷ ಸೂಚನೆ :- ಪ್ರಸಕ್ತ ಶಾಲಿನ ಬೆಳೆ ವಿಮೆ ಸಮೀಕ್ಷೆ ನಡೆಸದ ರೈತರ ಮುಂದಿನ ಸಾಲಿನಲ್ಲಿ ಬೆಲೆ ವಿಮೆ ಯೋಜೆನೆಯ ಲಾಭವನ್ನು ಪಡೆಯಲು ಅರ್ಹತೆಯನ್ನು ಹೊಂದಿರುವುದಿಲ್ಲ ಎಂದು ಸೂಚಿಸಲಾಗಿದೆ.