ಕಾಳು ಮೆಣಸು: ಒಂದು ಎಕರೆ, ಲಕ್ಷಾಂತರ ಲಾಭ! ಕೃಷಿ ಮಾರುಕಟ್ಟೆ ಮತ್ತು ಲಾಭದ ರಹಸ್ಯ! M001


Black Pepper Farming ರೈತರರು ಆರ್ಥಿಕವಾಗಿ ಸದೃಢರಾಗಲು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಜೊತೆಗೆ ಬಹು ವಿಧದ ಬೆಳೆ ಗಳನ್ನೂ ಬೆಳೆದರೆ ಒಂದಲ್ಲ ಒಂದು ಬೆಳೆಗೆ ನಿಖರವಾದ ಬೆಲೆ ಸಿಕೆ ಸಿಗುತ್ತದೆ.

ಆದರೆ ಇತ್ತೀಚೆಗಿನ ರೈತರು ಒಂದೇ ಬೆಳೆ ಯನ್ನು ಮಾಡಿ ಆ ಬೆಳೆಗೆ ಸೂಕ್ತವಾದ ಬೆಲೆ ಸಿಕ್ಕಿಲ್ಲ ಅಂದರೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿರತ್ತೆ ಹಾಗಾಗಿ ಈ ಲೇಖನದಲ್ಲಿ ಅಡಿಕೆಯ ಜೊತೆಗೆ ಅಥವಾ ಈ ಕೃಷಿಯನ್ನೇ ಆಧುನಿಕ ತಂತ್ರಜ್ಞಾನ ಬಳಸಿ ಮಾಡಿದರೆ ಕಂಡಿತಾ ಒಳ್ಳೆ ಲಾಭವನ್ನು ಪಡೆಯಬಹುದು ಹಾಗಾದರೆ ಈ ಕೃಷಿ ಯಾವುದು ಯಾವ ರೀತಿ ಮಾಡೋದು ಈ ಎಲ್ಲದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೋಡೋಣ ಬನ್ನಿ …

ಇದನ್ನು ಓದಿ :-ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ

ಕಾಳು ಮೆಣಸಿನ (Black Pepper) ಕೃಷಿ ಒಂದು ಲಾಭದಾಯಕ ವ್ಯವಸಾಯಿಕ ಚಟುವಟಿಕೆಯಾಗಿದೆ. ಇದರ ಬೇಡಿಕೆ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಾಗಿದೆ. ಕಾಳು ಮೆಣಸಿನ ಸರಿಯಾದ ಕೃಷಿ ಪದ್ಧತಿ, ನಾಟಿ ಮಾಡುವ ವಿಧಾನ ಮತ್ತು ಮಾರುಕಟ್ಟೆ ಬೆಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾಳು ಮೆಣಸಿನ ಕೃಷಿಗೆ ಅನುಕೂಲವಾದ ಹವಾಮಾನ ಮತ್ತು ಮಣ್ಣು:-

  • ಕಾಳು ಮೆಣಸಿನ ಕೃಷಿಗೆ ಹವಾಮಾನ ತುಂಬಾನೇ ಮುಖ್ಯವಾಗುತ್ತದೆ ಹಾಗಾದರೆ ಈ ಕೃಷಿಯನ್ನು ಯಾವ ತಹರಹ ಹವಾಮಾನದಲ್ಲಿ ಮಾಡಬಹುದು ಎಂದು ನೋಡೋಣ ಬನ್ನಿ …
  • ಹವಾಮಾನ: ಉಷ್ಣವಲಯದ ಹವಾಮಾನ (20°C – 35°C) ಅನುಕೂಲಕರ. 150-250 cm ವಾರ್ಷಿಕ ಮಳೆ ಬೇಕು.
  • ಮಣ್ಣು: ಫಲವತ್ತಾದ, ಸುಣ್ಣಕಲ್ಲು ಮಿಶ್ರಿತ ಕೆಂಪು ಮಣ್ಣು ಅಥವಾ ಲ್ಯಾಟರೈಟ್ ಮಣ್ಣು ಉತ್ತಮ. ನೀರು ನಿಲ್ಲದಂತೆ ಜೌಗು ಮುಕ್ತ ಮಣ್ಣು ಬೇಕು.

ಕಾಳು ಮೆಣಸಿನ ವಿವಿಧ ತಳಿಗಳು :-

ಹೌದು ಮಹಾವಾಣಕ್ಕೆ ಸಂಬಂಧಿಸಿದಂತೆ ವಿವಿಧ ತಳಿಗಳನ್ನು ನೀವು ಕೃಷಿಯನ್ನು ಮಾಡಬೇಕಾಗುತ್ತದೆ ಯಾವ ಯಾವ ತಳಿಗಳು ಇದ್ದವೇ ನೋಡೋಣ …

Panniyur-1, Karimunda, Subhakara, IISR-Thevam, Sreekara (ಉತ್ತಮ ಇಳುವರಿ ಮತ್ತು ರೋಗ ನಿರೋಧಕ ಶಕ್ತಿ ಇರುವವು).

ಮಲಬಾರ್ ಮೆಣಸು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ.

ಈ ಮೇಲಿನ ತಳಿಗಳನ್ನು ನಾಟಿಮಾಡಬಹುದು

ನಾಟಿ ಮಾಡುವ ವಿಧಾನ ಮತ್ತು ತಿಂಗಳು :-

  • ಮೊದಲು ನೀವು ಸಸಿ ತಯಾರಿಕೆ ಮಾಡಿಕೊಳ್ಳಬೇಕು ನಂತರ
    ಕಾಂಡದ ತುಂಡುಗಳು (ಸ್ಟೆಮ್ ಕಟ್ಟಿಂಗ್) ಅಥವಾ ಬೀಜಗಳಿಂದ ಸಸಿ ಮಾಡಬಹುದು.
  • ಸ್ಟೆಮ್ ಕಟ್ಟಿಂಗ್: 2-3 ಗಂಟುಗಳಿರುವ 30-45 cm ಉದ್ದದ ಕಾಂಡ ತುಂಡುಗಳನ್ನು ನೆಟ್ಟು ಸಸಿ ತಯಾರಿಸಬಹುದು (ಶೇಕಡಾ 90% ಬೇರು ಬಿಡುವ ಸಾಧ್ಯತೆ).
  • ಈ ಕಾಳುಮೆಣಸಿನ ಕೃಷಿ ಮಾಡಲು ಸೂಕ್ತವಾದ ತಿಂಗಳು ಜೂನ್-ಜುಲೈ (ಮಳೆಗಾಲದ ಆರಂಭ) ಅತ್ಯುತ್ತಮ.

ಕೊಯ್ಲು ಮತ್ತು ಇಳುವರಿ:-

  • ಕೊಯ್ಲು ಮತ್ತು ಇಳುವರಿಯ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೋಡಬಹದು
  • ಕೊಯ್ಲು ಸಮಯ: ನಾಟಿ ಮಾಡಿದ 3-4 ವರ್ಷಗಳ ನಂತರ ಕೊಯ್ಲು.
  • ಕಾಳು ಮೆಣಸು ಹಸಿರಾಗಿದ್ದಾಗ (ಪೂರ್ಣ ಗಾತ್ರ) ಕಿತ್ತು, 4-5 ದಿನಗಳ ಕಾಲ ಒಣಗಿಸಿ ಕಪ್ಪು ಮೆಣಸು ತಯಾರಿಸಬಹುದು.
  • ಇಳುವರಿ ಎಷ್ಟು ವರ್ಷಕ್ಕೆ ಎಷ್ಟು ಬರುತ್ತದೆ
  • 4ನೇ ವರ್ಷ: 400-500 kg/ಎಕರೆ.
  • 6-8ನೇ ವರ್ಷ: 1-2 ಟನ್/ಎಕರೆ (ಉತ್ತಮ ನಿರ್ವಹಣೆಯಲ್ಲಿ).

ಒಟ್ಟಾರೆಯಾಗಿ ಕಾಳು ಮೆಣಸಿನ ಕೃಷಿ ದೀರ್ಘಕಾಲೀನ ಲಾಭದಾಯಕ ವ್ಯವಸ್ಥೆ. ಸರಿಯಾದ ತಂತ್ರಜ್ಞಾನ ಮತ್ತು ಮಾರುಕಟ್ಟೆ ಸಂಪರ್ಕದೊಂದಿಗೆ ರೈತರು ಉತ್ತಮ ಆದಾಯ ಗಳಿಸಬಹುದು.

ಕಾಳುಮೆಣಸಿನ ಬಳ್ಳಿಗೆ ಕರೆಮಾಡಿ :- 6364439656

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Comment