ಕಾಳು ಮೆಣಸು ಬೆಳೆಯುವ ಸರಿಯಾದ ವಿಧಾನ ಈ ರೀತಿ … ಯಾರಿಗೂ ಗೊತ್ತೇ ಇಲ್ಲ ..

Black Pepper farming in Karnataka । ಕಾಳು ಮೆಣಸು ಬೆಳೆಯುವ ಸರಿಯಾದ ವಿಧಾನ ಈ ರೀತಿ ...

ಪ್ರತಿಯೊಬ್ಬ ರೈತರು ಗಮನಿಸಬೇಕಾದ ಪ್ರಮುಖ ಮಾಹಿತಿ ಈ ಮಾಹಿತಿಯನ್ನು ನೀವು ತಿಳಿದುಕೊಂಡು ಕಾರ್ಯರೂಪಕ್ಕೆ ತಂದರೆ ಕಂಡಿತಾ ಆರ್ಥಿಕವಾಗಿ ರೈತರು ಸದೃಢರಾಗಬಹುದು ಇದರ ಬಗ್ಗೆ ತಿಳಿಸಿಕೊಡ್ತಿನಿ ಈ ಮಾಹಿತಿಯನ್ನು ಎಲ್ಲ ರೈತರಿಗೂ ಶೇರ್ ಮಾಡಿ ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಕೆಳೆಗೆ ಕಾಣಿಸುವ ಟೆಲಿಗ್ರಾಮ್ ಗೆ ಜಾಯಿನ್ ಆಗಿ…

Black Pepper farming in Karnataka

ಕಾಳುಮೆಣಸಿನ ಕೃಷಿಯನ್ನು ಪ್ರತಿಯೊಬ್ಬ ರೈತರು ಮಿಶ್ರ ಬೇಸಾಯ ಮಾಡೋದ್ರಿಂದ ಆರ್ಥಿಕವಾಗಿ ಸದೃಢರಾಗಬಹುದು ಈ ಕೃಷಿಯನ್ನು ಮಾಡುವ ವಿಧಾನ ಈ ಕೆಳಗಿನಂತಿದೆ .

ಕಾಳು ಮೆಣಸಿನ ಕೃಷಿಗೆ ಹವಾಮಾನ ಹೇಗಿರಬೇಕು :-

ಕಾಳುಮೆಣಸಿನ ಕೃಷಿ ಮಾಡಬೇಕು ಅಂದ್ರೆ ಸೂಕ್ತ ಹವಾಮಾನ ಬೇಕಾಗುತ್ತದೆ ಉಷ್ಣವಲಯದ ಹಾಗೂ ಉಪೋಷ್ಣವಲಯದ ಹವಾಮಾನ (20°C – 35°C)

ಮಣ್ಣು ಹೇಗಿರಬೇಕು :-

ಸಾರವತ್ತಾದ, ಜೌಗು ಅಲ್ಲದ ಮತ್ತು ನೀರು ಚೆನ್ನಾಗಿ ಬಸಿದು ಹೋಗುವ ಕೆಂಪು ಮಣ್ಣು ಅಥವಾ ಕಪ್ಪು ಮಣ್ಣು (pH 5.5 – 6.5).

ಇದನ್ನು ಓದಿರಿ .. ಕಾಳು ಮೆಣಸು: ಒಂದು ಎಕರೆ, ಲಕ್ಷಾಂತರ ಲಾಭ!

ವಾತಾವರಣ ಹೇಗಿರಬೇಕು :-

ವಾರ್ಷಿಕ 150-250 cm ಮಳೆ ಅಥವಾ ನೀರಾವರಿ ಸೌಲಭ್ಯ ಇರಬೇಕಾಗುತ್ತದೆ

ಯಾವ ಪ್ರದೇಶದಲ್ಲಿ ಕೃಷಿ ಮಾಡಲು ಹೆಚ್ಚು ಸೂಕ್ತ :-

ಕಾಳುಮೆಣಸಿನ ಕೃಷಿ ಮಾಡಲು ಸೂಕ್ತವಾದ ಹವಾಮಾನ ಪ್ರದೇಶ ಕರ್ನಾಟಕದಲ್ಲಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳು ಯೋಗ್ಯವಾಗಿವೆ.

ಲಭ್ಯವಿರುವ ತಳಿಗಳು :-

Panniyur-1SubhakaraSreekaraPanchami (ಭಾರತದಲ್ಲಿ ಸಾಮಾನ್ಯ).

KarimundaKottanadanAimpiriyan (ದಕ್ಷಿಣ ಭಾರತದ ಸ್ಥಳೀಯ ಜಾತಿಗಳು).

ನಾಟಿಮಾಡುವ ವಿಧಾನ :-

ನಾಟಿಮಾಡುವ ವಿಧಾನದ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೀಡಲಾಗಿದೆ

ಸಸಿ ತಯಾರಿಕೆ: ಬೀಜಗಳು ಅಥವಾ ಕಾಂಡದ ಕತ್ತರಿಸಿದ ತುಂಡುಗಳಿಂದ (ಕಟಿಂಗ್ಸ್) ಸಸಿ ಮಾಡಲಾಗುತ್ತದೆ.

ನಾಟಿ ಸಮಯ: ಜೂನ್-ಜುಲೈ (ಮಳೆಗಾಲದ ಆರಂಭ).

ನಡುವಳಿ:

ಗಿಡಗಳ ನಡುವೆ 3-4 ಮೀಟರ್ ಅಂತರ.

50 cm × 50 cm × 50 cm ಗುಂಡಿಗಳನ್ನು ತೋಡಿ, ಸಾವಯವ ಗೊಬ್ಬರ ಮಿಶ್ರಣದಿಂದ ತುಂಬಿಸಿ.

ತೆಂಗು, ಸರ್ವಿಗೆ, ಅಡಕೆ ಮರಗಳನ್ನು ಬೆಂಬಲ ಗಿಡಗಳಾಗಿ ಬಳಸಬಹುದು.

ಮಾರುಕಟ್ಟೆ ಮತ್ತು ಲಾಭ :-

ವಿವಿಧ ಸ್ಥಳಗಳಿಗೆ ಹಾಗೂ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆ ದರ ಇರುತ್ತದೆ ಪ್ರಸ್ತುತ ₹300-₹600/ಕೆಜಿ (ಗುಣಮಟ್ಟ ಮತ್ತು ಮಾರುಕಟ್ಟೆ ಅವಲಂಬಿಸಿ)

ಲಾಭ :-

1 ಹೆಕ್ಟೇರ್ನಲ್ಲಿ 3-4 ಲಕ್ಷ ರೂ. ವರೆಗೆ ಒಟ್ಟು ಆದಾಯ.

ನಿವ್ವಳ ಲಾಭ: 2-2.5 ಲಕ್ಷ ರೂ. (ಕಳೆದುಕೊಂಡ ಖರ್ಚುಗಳ ನಂತರ).

ವರ್ಷದಿಂದ ವರ್ಷಕ್ಕೆ ಲಾಭದಲ್ಲಿ ಹೆಚ್ಚು ಕಡಿಮೆ ಆಗುತ್ತಾ ಇರುತ್ತದೆ

ಒಟ್ಟಾರೆ ಹೇಳಬೇಕು ಅಂದ್ರೆ ರೈತರು ಈ ಕಾಳುಮೆಣಸು ಕೃಷಿಯನ್ನು ಮಿಶ್ರ ಬೇಸಾಯಕಾಗಿ ಮಾಡಿದರೆ ಖಂಡಿತ ಲಾಭವನ್ನು ಗಳಿಸಬಹದು.

Latest Post:-

Leave a Reply

Your email address will not be published. Required fields are marked *