ಬಿಪಿಎಲ್ (BPL) ಕಾರ್ಡ್‌ಗಳನ್ನು ಎಪಿಎಲ್ (APL) ಕಾರ್ಡ್‌ಗಳಾಗಿ ಪರಿವರ್ತನೆ ಮುಂದೇನು? | BPL List

ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಹೆಚ್ಚಿನ ಸಂಖ್ಯೆಯ ಅನರ್ಹ ಪಡಿತರ ಚೀಟಿಯನ್ನು ರದ್ದುಪಡಿಸಲು ಎಲ್ಲ ರೀತಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಸುಮಾರು 1.2 ಮಿಲಿಯನ್ ಬಿಪಿಎಲ್ ಕಾಡುಗಳನ್ನ ಪತ್ತೆ ಹಚ್ಚಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಹೆಚ್ ಮುನಿಯಪ್ಪ ಅವರು ಚರ್ಚೆಯನ್ನು ನಡೆಸಿದ್ದಾರೆ ಅರ್ಹತಾ ಮಾನದಂಡಗಳನ್ನು ಆಧರಿಸಿ ಕಾರ್ಡುಗಳನ್ನು ರದ್ದು ಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಉದ್ದೇಶ

ಕರ್ನಾಟಕದಲ್ಲಿ ಹಲವಾರು ಜನ ಪಡಿತರ ಚೀಟಿಯನ್ನು ಬಳಸುತ್ತಿದ್ದು ಅರ್ಹ ವ್ಯಕ್ತಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ ಇದನ್ನು ಗಮನಿಸಿದ ಕರ್ನಾಟಕ ಸರ್ಕಾರ ಇದೀಗ ಈ ಕಾರ್ಡ್ ಗಳನ್ನು ರದ್ದು ಪಡಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಇದು ಆರ್ಥಿಕ ಹಾಗೂ ಸಾಮಾಜಿಕ ಹಿತ ದೃಷ್ಟಿಯಿಂದ ಕೈಗೊಳ್ಳಲಾಗುತ್ತಿರುವ ಒಂದು ಮುಖ್ಯ ಉದ್ದೇಶ ಇದಾಗಿದೆ.

ಬಿಪಿಎಲ್ ಕಾರ್ಡ್ ಪರಿವರ್ತನೆಗೆ ಪ್ರಮುಖ ಕಾರಣಗಳು

ಆರ್ಥಿಕ ಹೊರೆ : ಅನರ್ಹ ಫಲಾನುಭವಿಗಳ ಮೇಲಿನ ರಾಜ್ಯದ ಸಬ್ಸಿಡಿ ವೆಚ್ಚವನ್ನು ಕಡಿಮೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ

ವಂಚನೆಯನ್ನ ತಡೆಗಟ್ಟುವಿಕೆ : ಕಲ್ಯಾಣ ಕಾರ್ಯಕ್ರಮಗಳಲ್ಲಿ ಆಗಬಹುದಾಗಿರ್ತಕ್ಕಂತ ದೊಡ್ಡ ವಂಚನೆಗಳನ್ನ ತಪ್ಪಿಸಲು ಈ ಒಂದು ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಮೋಸದ ವಿಧಾನಗಳ ಮೂಲಕ ಬಿಪಿಎಲ್ ಕಾಡುಗಳನ್ನು ಪಡೆಯುತ್ತಿರುವುದು ಬೆಳಕಿಗೆ ಬಂದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.

ಸರ್ಕಾರದ ಗ್ಯಾರಂಟಿ ಯೋಜನೆಗಳು :

ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳಂತ ಕಲ್ಯಾಣ ಕಾರ್ಯಕ್ರಮಗಳು ದುರುಪಯೋಗದಂತೆ ಮತ್ತು ನಿರ್ದಿಷ್ಟ ಫಲಾನುಭವಿಗಳಿಗೆ ಮಾತ್ರ ಯೋಜನೆ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಈ ಒಂದು ಕಾರಣದಿಂದಾಗಿ ಸರ್ಕಾರ ಪ್ರಸ್ತುತ ಬಿಪಿಎಲ್ ಕಾರ್ಡನ್ನು ರದ್ದು ಮಾಡಲು ಮುಂದಾಗಿದೆ.

ರದ್ಧತಿಯಲ್ಲ ಪರಿವರ್ತನೆ:

ಬಿಪಿಎಲ್ ಕಾರ್ಡ್ ರದ್ದತಿ ರದ್ಧತಿಯಲ್ಲ ಪರಿವರ್ತನೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಹೆಚ್ ಮುನಿಯಪ್ಪ ಅವರು ಸಾರ್ವಜನಿಕರಿಗೆ ಸಂಪೂರ್ಣ ರದ್ಧತಿಯ ಬದಲು ಅನರ್ಹ ಫಲಾನುಭವಿಗಳ ಕಾಡುಗಳನ್ನು ಬಿಪಿಎಲ್ ಇಂದ ಎಪಿಎಲ್ ಗೆ ಪರಿವರ್ತಿಸಲಾಗುವುದು ಎಂದು ಭರವಸೆ ನೀಡಿದರು ಇದು ಕುಟುಂಬಗಳು ತಮ್ಮ ಎಪಿಎಲ್ ಕಾರ್ಡ್ ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಬಡವರಿಗೆ ಭರವಸೆ:

ನಿಜವಾದ ಬಡ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಹೇಳಿದ್ದಾರೆ ಅದರಿಂದಾಗಿ ಬಡ ಫಲಾನುಭವಿಗಳಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ನೋಡಿಕೊಳ್ಳಲು ದೃಷ್ಟಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ

ನಿಮ್ಮ ಬಿಪಿಎಲ್ ಕಾರ್ಡ್ ರದ್ದಾದರೆ ಈ ಕೆಳಗಿನ ವಿವಿಧ ಹಂತಗಳನ್ನ ಫಾಲೋ ಮಾಡಿ:

ಮರು ಅರ್ಜಿ : ನಿಮ್ಮ ಕಾರ್ಡನ್ನು ತಪ್ಪಾಗಿ ಪರಿವರ್ತಿಸಲಾಗಿದೆ ಎಂದು ಕಂಡುಬಂದರೆ ನೀವು ಮತ್ತೆ ಅರ್ಜಿಯನ್ನ ಸಲ್ಲಿಸಿ ಅದನ್ನು ಸಾಬೀತುಪಡಿಸಿ ಸೂಕ್ತವಾದ ದಾಖಲೆಗಳನ್ನು ಒದಗಿಸಿದರೆ ಆ ಕಾರ್ಡನ್ನ ಮತ್ತೆ ಬಿಪಿಎಲ್ ಕಾರ್ಡಿಗೆ ಪರಿವರ್ತಿಸಿಕೊಳ್ಳಬಹುದು

ಆನ್ಲೈನ್ ಪೋರ್ಟಲ್ ಕಾರ್ಡ್ ಸ್ಥಿತಿಯನ್ನು ಪರಿಸ್ಥಿತಿ ತಿದ್ದುಪಡಿ ವಿನಂತಿಗೆ ಅರ್ಜಿಯನ್ನು ಸಲ್ಲಿಸಬಹುದು ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದು ಬಿಪಿಎಲ್ ಕಾರ್ಡನ್ನ ಮತ್ತೆ ಪರಿಶೀಲಿಸಿ ತಮಗೆ ಅನ್ಯಾಯವಾಗಿದ್ದರೆ ಈ ಕಾರ್ಡ್ ಅನ್ನು ಮತ್ತೆ ಪಡೆದುಕೊಳ್ಳಬಹುದು.

ನಿಮ್ಮ ಕಾರ್ಡನ್ನು ಹೀಗೆ ಪರಿಶೀಲಿಸಿಕೊಳ್ಳಿ:

ಪ್ರಸ್ತುತ ನಿಮ್ಮ ಕಾಡಿನ ಸ್ಥಿತಿ ಹೇಗಿದೆ ಅನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅಲ್ಲಿ ನಿಮ್ಮ ಬಿಪಿಎಲ್ ಕಾರ್ಡ್ ನಂಬರ್ ಹಾಕಿ ಪರಿಶೀಲಿಸಿಕೊಳ್ಳಬಹುದು.

ಅಂತಿಮ ತೀರ್ಮಾನ

ನಿಮ್ಮ ಬಿಪಿಎಲ್ ಕಾರ್ಡ್ ಸದ್ಯದ ಪರಿಸ್ಥಿತಿ ಹೇಗಿದೆ ಅನ್ನುವುದರ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನು ತಿಳಿದುಕೊಳ್ಳಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಪರಿಶೀಲಿಸಿಕೊಂಡು ನಿಮ್ಮ ಕಾಡಿನ ಪರಿಸ್ಥಿತಿ ಹೇಗಿದೆ ಅನ್ನೋದನ್ನ ಬಗ್ಗೆ ತಿಳಿದುಕೊಳ್ಳಬಹುದು.

Leave a Comment