ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ತೆಂಗು ಬೆಳೆಗಾರರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಸರ್ಕಾರದಿಂದ ತೆಂಗಿನ ಗಿಡ ನೆಡಲು ಸಹಾಯಧನ ಯೋಜನೆ ಜಾರಿಗೆ ಬಂದಿದೆ .. ನಿಮಗೂ ಈ ಬೇಕು ಅಂದ್ರೆ ಈಗಲೇ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ. ಹಾಗೆ ಕೆಳಗೆ ಕಾಣಿಸುವ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ.
ತೆಂಗಿನ ಕೃಷಿಯನ್ನು ಪ್ರೋತ್ಸಾಹಿಸಲು ಸರ್ಕಾರ ನಿರ್ಧಾರ :-
ನಿಮಗೆ ಗೊತ್ತಿರುವ ಹಾಗೆ ಕಳೆದ ದಶಕಗಳಲ್ಲಿ ಕರ್ನಾಟಕದಲ್ಲಿ (ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ) ಅಡಿಕೆ ಬೆಳೆಯ ಲಾಭದಾಯಕತೆಯಿಂದಾಗಿ ಬಹಳಷ್ಟು ರೈತರು ತೆಂಗಿನ ತೋಟಗಳನ್ನು ಕಡಿದು ಅಡಿಕೆ ತೋಟಗಳನ್ನು ಸ್ಥಾಪಿಸಿದ್ದಾರೆ.
ನಿಮಗೆ ಗೊತ್ತಿರುವ ಹಾಗೆ ರೈತರೆಲ್ಲರೂ ತಮ್ಮ ಅತಿ ಆಸೆಗೆ ಮಾಡಬಾರದೆಲ್ಲವನ್ನು ಮಾಡುತ್ತಿದ್ದಾರೆ ಅಂದರೆ ಇತ್ತೀಚಿನ ವರ್ಷಗಳಲ್ಲಿ ತೆಂಗಿನ ಕಾಯಿ ಮತ್ತು ತೆಂಗಿನ ಎಣ್ಣೆಯ ಬೆಲೆ ಗಣನೀಯವಾಗಿ ಏರಿಕೆಯಾಗಿದೆ (ಪ್ರಸ್ತುತ ₹25–₹50/ಕಾಯಿ). ಇದರ ಪರಿಣಾಮವಾಗಿ, ತೆಂಗಿನ ಕೃಷಿಯನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಹಸಿರು ಧೋರಣೆಗಳನ್ನು ಕೈಗೊಂಡಿದೆ ಇದರಿಂದ ರೈತರಿಗೆ ತುಂಬಾನೇ ಸಹಕಾರಿಯಾಗಲಿದೆ.
ಯೋಜನೆಗೆ ಯಾರು ಅರ್ಹರು :-
ಈ ಯೋಜನೆಗೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು ಅನ್ನುವುದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ತಿಳಿಸಲಾಗಿದೆ
ಕರ್ನಾಟಕದ ಮೂಲ ರೈತರು (ಭೂಮಿಯ ಮಾಲಿಕತ್ವದ ದಾಖಲೆ ಅಗತ್ಯ).
ಹೊಸ ತೆಂಗಿನ ತೋಟ ಅಥವಾ ಖಾಲಿ ಜಾಗದಲ್ಲಿ ನೀರು ಸೌಲಭ್ಯವಿರುವ ಪ್ರದೇಶಗಳು.
SC/ST ಮತ್ತು ಸಣ್ಣ ರೈತರಿಗೆ ಆದ್ಯತೆ.
ಈ ಮೇಲಿನ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು .
ಸಹಾಯಧನದ ವಿವರ :-
ಈ ಕೆಳಗಿನ ಸಹಾಯಧವನ್ನು ಸರ್ಕಾರ ಪ್ರತಿಯೊಬ್ಬ ರೈತರಿಗೂ ಕೊಡುತ್ತಿದೆ
₹1.25 ಲಕ್ಷ ಪ್ರತಿ ಹೆಕ್ಟೇರಿಗೆ (ಕನಿಷ್ಠ 1 ಹೆಕ್ಟೇರ್ ತೋಟಕ್ಕೆ ಅರ್ಹತೆ).
ಸಹಾಯಧನವನ್ನು 2 ಹಂತಗಳಲ್ಲಿ ನೀಡಲಾಗುತ್ತದೆ:
ಮೊದಲ ಹಂತ: ತೆಂಗಿನ ಮರ ನಡುವಿಕೆಗೆ ₹50,000 (ನೆಡುವ ವೆಚ್ಚ, ಸಸಿಗಳು, ಕಾರ್ಮಿಕ).
ಎರಡನೇ ಹಂತ: 3 ವರ್ಷಗಳ ನಂತರ ತೋಟದ ನಿರ್ವಹಣೆಗೆ ₹75,000 (ಗೊಬ್ಬರ, ನೀರಾವರಿ, ಕೀಟನಿಯಂತ್ರಣ).
ಮೇಲೆ ತಿಳಿಸಿದ ಹಾಗೆ ವಿವಿಧ ಹಂತಗಳಲ್ಲಿ ಸಹಾಯಧನವನ್ನು ನೀಡಲಾಗುತ್ತದೆ
ಅರ್ಜಿ ಸಲ್ಲಿಸುವಿಧಾನ :-
ಈ ಕೆಳಗೆ ತಿಳಿಸಿದ ವಿವಿಧ ಹಂತಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು :-
ಸ್ಥಳೀಯ ಕೃಷಿ ಅಧಿಕಾರಿ ಅಥವಾ ಹೋಬಳಿ ಕೃಷಿ ಕಚೇರಿಯಿಂದ ಅರ್ಜಿ ಪತ್ರ ಪಡೆಯಿರಿ.
ಭೂಮಿಯ ದಾಖಲೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ನಕಲು ಜೊತೆಗೆ ಸಲ್ಲಿಸಿ.
ಕೃಷಿ ಇಲಾಖೆಯ ತಂಡವು ಸ್ಥಳ ಪರಿಶೀಲನೆ ನಡೆಸಿ ಅನುಮೋದಿಸುತ್ತದೆ.
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಸುಗಂಧ ಲ್ಯಾಕ್ಟಿಕ್ ಬಾಡಿ ಲೋಷನ್
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025
- ಭಾಗ್ಯಲಕ್ಷ್ಮಿ ಯೋಜನೆ ದುಡ್ಡು ಬಂದೆ ಬಿಡ್ತು …..ಇಲ್ಲಿ ನೋಡಿ
- ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ