ರೈತರರು ನಮ್ಮ ರಾಷ್ಟ್ರದ ಮೂಲಸ್ತಂಭ ಅವರ ಕಷ್ಟ – ಸಂಕಟಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಈ ದಿಶೆಯಲ್ಲಿ ರೈತರ ವಿವಿಧ ಬೇಡಿಕೆಯನ್ನು ಈಡೇರಿಸಿವಂತೆ ರತ್ನ ಭಾರತ ರೈತ ಸಮಾಜದಿಂದ ಎಪಿಎಂಸಿ ಸಚಿವರಾದ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಆತ್ಮಹತ್ಯೆ ತಡೆ :-
ರೈತರ ಆತ್ಮಹತ್ಯೆಯ ವಿಷಾದಕರ ಘಟನೆಯನ್ನು ತಡೆಯಲು ತಜ್ಞರನ್ನು ಒಳಗೊಂಡ ಒಂದು ವಿಶೇಷ ಸಮಿತಿಯನ್ನು ರಚಿಸಬೇಕು. ಈ ಸಮಿತಿಯ ಶಿಫಾರಸ್ಸನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ಜಾರಿಗೆ ತರೆಬೇಕು.
ಸಾಲದಿಂದ ಮುಕ್ತಿ :-
ಸಣ್ಣ ಮತ್ತು ಅತೀ ಸಣ್ಣ ರೈತರು ಈಗಾಗಲೇ ವಿವಿಧ ಕಾರಣಗಳಿಗೆ ಸಾಲದ ಸುಳಿಯಲ್ಲಿ ಸಿಲಿಕಿಕೊಂಡಿದ್ದಾರೆ ಇವರ ಸಾಲವನ್ನು ಮನ್ನಾ ಮಾಡಿ ಅವರಿಗೆ ಹೊಸತನದಿಂದ ಬೇಸಾಯವನ್ನು ಪ್ರಾರಂಭಿಸಲು ಅವಕಾಶ ನೀಡುವ ಒಂದು ಜೀವನಾಧಾರ ನಿರ್ಧಾರವನ್ನು ತೆಗೆದುಕೊಳ್ಳಬೇಕು.
ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಾಯ :-
ರೈತರ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಲು ಸರ್ಕಾರ ವಿಶೇಷ ಆರ್ಥಿಕ ನೆರವನ್ನು ನೀಡಬೇಕು. ಇದು ರೈತರ ಕುಟುಂಬದ ಭವಿಷ್ಯವನ್ನು ಭದ್ರಪಡಿಸುವ ಒಂದು ಉತ್ತಮ ದಾರಿಯಾಗಿದೆ.
ಭ್ರಷ್ಟಾಚಾರದಿಂದ ಮುಕ್ತಿ :-
ಬೆಂಗಳೂರು ದಕ್ಷಿಣ ಮತ್ತು ಉತ್ತರ ವಿಭಾಗದ ರೈತರ ಹಣವನ್ನು ಲೂಟಿ ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮವನ್ನು ಜರುಗಿಸಿ ಅಂತಹ ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಬೇಕು.
ನ್ಯಾಯಯುತ ಬೆಲೆ :-
ರೈತರು ಬೆಳೆದಂಥ ಬೆಳೆಗಳಿಗೆ ನ್ಯಾಯಯುತ ಬೆಂಬಲ ಬೆಲೆ ಸಿಗುವಂತೆ ಮಾಡಬೇಕು ಇದಕ್ಕೆ ವೈಜ್ಞಾನಿಕ ವಿಧಾನ ಅಳವಡಿಕೆ ಮಾಡಿಕೊಳ್ಳಲು ಸಹಾಯ ಮಾಡಬೇಕು.
ರತ್ನ ಭಾರತ ರೈತ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಎಲ್ . ಲಕ್ಷ್ಮಣ್ ಅವರು ಈ ಮನವಿಯನ್ನು ಸಚಿವರಿಗೆ ಸಲ್ಲಿಸಿದರು.