ಗ್ರಾಮ ಪಂಚಾಯಿತಿ ಯೋಜನೆಗಳು ಸಂಪೂರ್ಣ ಮಾಹಿತಿ ನೋಡಿ..Grama Panchayat Scheme


ಗ್ರಾಮ ಪಂಚಾಯಿತಿಯ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಹಲವಾರು ಯೋಜನೆಗಳನ್ನ ಸರ್ಕಾರಗಳು ಜಾರಿಗೆ ತರುತ್ತಿರುತ್ತದೆ ಈ ಕೆಳಗೆ ಹಲವಾರು ಯೋಜನೆಗಳ ಬಗ್ಗೆ ನಾವು ಮಾಹಿತಿಯನ್ನು ತಿಳಿಸಿದ್ದೇವೆ.


ಗ್ರಾಮ ಪಂಚಾಯಿತಿಗಳು ಗ್ರಾಮಸ್ಥರು ಅಗತ್ಯಗಳನ್ನು ಪೂರಿಸಲು ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದರಿಂದ ಮುಖ್ಯವಾಗಿ ಮೂಲ ಸೌಕರ್ಯ ಕುಡಿಯುವ ನೀರು ನೈರ್ಮಲ್ಯ ಉದ್ಯೋಗ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮೇಲೆ ಕೇಂದ್ರೀಕರಿಸುತ್ತವೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ ಎಂಬುದು ವಾರ್ಷಿಕ ಯೋಜನೆಯಾಗಿದ್ದು ಸಮುದಾಯದ ಭಾಗವಹಿಸುವಿಕೆ ಹಾಗೂ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಚಟುವಟಿಕೆಗಳನ್ನು ಗುರುತಿಸುತ್ತದೆ ಮತ್ತು ಜಾರಿಗೊಳಿಸುತ್ತದೆ ಇದರ ಬಗ್ಗೆ ಈ ಕೆಳಗೆ ಕೆಲವೊಂದಿಷ್ಟು ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದ್ದು ಈ ಯೋಜನೆಗಳ ಬಗ್ಗೆ ನೀವು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ಎಲ್ಲ ಮಾಹಿತಿಯನ್ನು ಓದಿ.

ಗ್ರಾಮ ಪಂಚಾಯಿತಿ ಯೋಜನೆಗಳ ಉದ್ದೇಶ

ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶ ಏನೆಂದರೆ ಗ್ರಾಮ ಪಂಚಾಯತಿಯ ಅಭಿವೃದ್ಧಿಯಿಂದ ಅಲ್ಲಿನ ಜನ ವಸತಿ ಪ್ರದೇಶ ಹಾಗೂ ಕುಡಿಯುವ ನೀರಿನ ಸೌಕರ್ಯ ಹೀಗೆ ಇವೆಲ್ಲ ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸಲು ಈ ಎಲ್ಲ ರೀತಿಯಾದ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಹಾಗೂ ಜನರಿಗೆ ಸೂಕ್ತವಾದ ಸೌಲಭ್ಯವನ್ನು ಒದಗಿಸುವ ಹಿತ ದೃಷ್ಟಿಯಿಂದ ಸರ್ಕಾರಗಳು ಈ ಯೋಜನೆಯನ್ನು ಜಾರಿಗೆ ತರುತ್ತವೆ.

ಗ್ರಾಮ ಪಂಚಾಯತಿ ವಿವಿಧ ಯೋಜನೆಗಳ ಮಾಹಿತಿ

ಇಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಸಿಗುವ ವಿವಿಧ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಟೆಲಿಗ್ರಾಂ ಚಾನಲ್ಗೆ ಜಾಯಿನ್ ಆಗಿ ಹಾಗೂ ಇನ್ಸ್ಟಾಗ್ರಾಮ್ ಪೇಜ್ ನ ಫಾಲೋ ಮಾಡಿ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ

ಈ ಯೋಜನೆಯನ್ನು ಭಾರತದ ಸರ್ಕಾರ ಜಾರಿಗೆ ತಂದಿರುವಂಥದ್ದು ಈ ಒಂದು ಯೋಜನೆ ಅಡಿಯಲ್ಲಿ ಉದ್ಯೋಗದ ಬೇಡಿಕೆ ಇರುವಂತ ಹಾಗೆ ಕೌಶಲ್ಯ ಕೈಗಳಿಂದ ಕೆಲಸ ಮಾಡಲು ಸಿದ್ಧರಿರುವಂತ ಗ್ರಾಮೀಣ ಕುಟುಂಬದ ವಯಸ್ಕರ ಸದಸ್ಯರಿಗೆ ಆರ್ಥಿಕ ವರ್ಷದಲ್ಲಿ ನೂರು ದಿನಗಳ ಕೂಲಿ ಉದ್ಯೋಗದ ಕಾನೂನನ್ನು ಜಾರಿಗೆ ಗೊಳಿಸಿರುವಂತದ್ದು ಇದು ಯೋಜನೆ ಉದ್ದೇಶ ಆಗಿರುವಂತದ್ದು.

ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ

ಸರ್ಕಾರವು ಪ್ರಾರಂಭಿಸಿರುವಂತ ಈ ಒಂದು ಯೋಜನೆ ಸಂಪರ್ಕವಿಲ್ಲದ ಸ್ಥಳಗಳಿಗೆ ರಸ್ತೆಯನ್ನ ಒದಗಿಸುವಂತಹ ಉದ್ದೇಶವನ್ನು ಹೊಂದಿರುವಂತಹ ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ

ಗ್ರಾಮೀಣ ಪ್ರದೇಶಗಳಿಗೆ ಕೊಳವೆ ನೀರು ಸರಬರಾಜು ಯೋಜನೆ ಮಾಡುವುದು ಹಾಗೆ ಕಿರು ನೀರು ಸರಬರಾಜು ನಂತರ ಕೈ ಪಂಪುಗಳು ಹಾಗೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಪೂರೈಸುವಂತಹ ಒಂದು ಉದ್ದೇಶವನ್ನ ಈ ಒಂದು ಯೋಜನೆ ಮಾಡುತ್ತದೆ.

ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ

ಈ ಯೋಜನೆ ಅಡಿಯಲ್ಲಿ ರಾಜ್ಯದ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಗ್ರಾಮಗಳನ್ನು ಆಯ್ಕೆ ಮಾಡಲು ಅನುಮೋದನೆ ನೀಡುವ ಕುರಿತು ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿರುವುದು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳು ಗ್ರಾಮ ವಿಕಾಸ ಯೋಜನೆಯ ಅನುಷ್ಠಾನ ಮಾಡುವಂತಹ ಹಲವಾರು ಕೆಲಸಗಳನ್ನು ಕೈಗೊಳ್ಳುವಂತ ಒಂದು ಉದ್ದೇಶವನ್ನು ಈ ಒಂದು ಯೋಜನೆ ಹೊಂದಿದೆ.

ಸ್ವಚ್ಛ ಭಾರತ್ ಮಿಷನ್ ಯೋಜನೆ

ಗ್ರಾಮೀಣ ಪ್ರದೇಶದಲ್ಲಿ ಗೃಹ ಶೌಚಾಲಯ ನಿರ್ಮಾಣಕ್ಕಾಗಿ 2018 19 ನೇ ಸಾಲಿನಲ್ಲಿ ಜಾರಿಗೆ ತಂದಿರುವ ಯೋಜನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಕ ನಿರ್ಮಾಣಕ್ಕಾಗಿ ಈ ಒಂದು ಯೋಜನೆಯಲ್ಲಿ ಹಣವನ್ನು ಮಂಜೂರು ಮಾಡಲಾಗುತ್ತದೆ.

ಅಂತಿಮ ವಿವರಣೆ

ಇಷ್ಟೇ ಯೋಜನೆಗಳು ಅಲ್ಲದೆ ಇನ್ನೂ ಸಾಕಷ್ಟು ಯೋಜನೆಗಳು ಗ್ರಾಮ ಪಂಚಾಯಿತಿಯ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಸರ್ಕಾರ ಹಲವರು ಯೋಜನೆಗಳನ್ನ ಜಾರಿಗೆ ತರುತ್ತಿರುತ್ತದೆ ಈ ಯೋಜನೆಗಳನ್ನ ಜಾರಿಗೊಳಿಸುವ ಮೂಲಕ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಹಾಗೂ ಗ್ರಾಮ ಪಂಚಾಯತಿಯಲ್ಲಿನ ಸ್ವಚ್ಛತೆ ನೀರಿನ ವ್ಯವಸ್ಥೆ ರಸ್ತೆ ಗುಣಮಟ್ಟ ಮನೆ ಶೌಚಾಲಯ ಹೀಗೆ ಪ್ರತಿಯೊಂದು ಉದ್ದೇಶವನ್ನು ಇಟ್ಟುಕೊಂಡು ಎಲ್ಲಿ ಹಲವಾರು ಯೋಜನೆಗಳನ್ನ ಜಾರಿಗೆ ತರಲಾಗುತ್ತದೆ.

ಇದನ್ನು ಓದಿರಿ :- PM ವಿದ್ಯಾರ್ಥಿವೇತನ ಯೋಜನೆ (PMSS) ಹುಡುಗರಿಗೆ ₹2500/- ಹುಡುಗಿಯರಿಗೆ ₹3000/-

Leave a Comment