ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi Housing Scheme) – ಕರ್ನಾಟಕ ಸರ್ಕಾರದ 1 ಲಕ್ಷ ಮನೆಗಳ ಅದ್ಭುತ ಯೋಜನೆ…HOME M

ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi Housing Scheme) – ಕರ್ನಾಟಕ ಸರ್ಕಾರದ 1 ಲಕ್ಷ ಮನೆಗಳ ಅದ್ಭುತ ಯೋಜನೆ

ಕರ್ನಾಟಕ ಸರ್ಕಾರ ಬೀದಿ ಬದಿ ವ್ಯಾಪಾರಿಗಳು , ಆಟೋ ಡ್ರೈವರ್ ಹಾಗೂ ಮನೆ ಇಲ್ಲದವರಿಗೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಒಂದು ಲಕ್ಷ ಮನೆಯನ್ನು ಬೆಂಗಳೂರಿನ ಜನತೆಗೆ ಕೊಡಲು ನಿರ್ಧರಿಸಿ ಇದೀಗ ಅದಕ್ಕೆ ಬೇಕಾಗಿರುವ ಮಂಗಳನ್ನು ಸಹ ನಿರ್ಮಾಣ ಮಾಡಿ ಅರ್ಜಿಯನ್ನು ಕರೆದಿದ್ದಾರೆ , ನಿಮಗೂ ಬೆಂಗಳೂರಿನಲ್ಲಿ ಒಂದು ಮನೆ ಬೇಕು ಅಂದ್ರೆ ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡಿ ಅರ್ಜಿ ಸಲ್ಲಿಸಿ ಮನೆ ನಿಮ್ಮದಾಗಿಸಿಕೊಳ್ಳಿ.

Rajiv Gandhi Housing Scheme

ಯೋಜನೆಯ ಮುಖ್ಯ ಉದ್ದೇಶ :-

ವಸತಿ ರಹಿತ ಹಿಂದುಳಿದ ಕುಟುಂಬಗಳಿಗೆ ಮನೆ ಕಲ್ಪಿಸಬೇಕು ಅನ್ನುವ ನಿಟ್ಟಿನಲ್ಲಿ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.

ವಾರ್ಷಿಕ ಆದಾಯದ ಮಿತಿ :-

ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆಯನ್ನು ಪಡೆಯುವವರಿಗೆ ವಾರ್ಷಿಕ ಆದಾಯದ ಮಿತಿ ಇರುವುದರಿಂದ ನಿಮ್ಮ ವರ್ಷ ಆದಾಯ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ತೆಗೆದುಕೊಳ್ಳಬೇಕು ಅಂದರೆ 3 ಲಕ್ಷ ರೂಪಾಯಿಗಳೊಳಗಿರುವವರು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.

ಈ ಯೋಜನೆಯ ಪ್ರಯೋಜನ :-

ಈ ಯೋಜನೆಯಿಂದ ಕಡಿಮೆ ಬೆಲೆಯಲ್ಲಿ ನಿಮಗೆ ಮನೆ ಸಿಗುವುದಲ್ಲದೆ ಸರ್ಕಾರದಿಂದ ಸಾಲ ಸೌಲಭ್ಯ ಸಹ ಸಿಗುತ್ತದೆ ಇದರ ಜೊತೆಗೆ ಸಬ್ಸಿಡಿ ಸಹ ಇರುತ್ತದೆ.

ಇದನ್ನು ಓದಿರಿ :- ಹೊಸ ಮನೆ, ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕ್ಕೆ ‘ಒಸಿ ವಿನಾಯಿತಿ

ಮನೆಯ ವಿಸ್ತಿರ್ಣ ಎಷ್ಟು :-

ಮನೆಗಳ ವಿಸ್ತಿರ್ಣಕ್ಕೆ ತಕ್ಕಂತೆ ಬೆಲೆಯನ್ನು ನಿಗದಿಪಡಿಸಿದ್ದು ನಿಮಗೆ ಯಾ ಅಳತೆಯ ಮನೆಬೇಕು ಅದನ್ನು ನೀವು ಸಬ್ಸಿಡಿ ಧರದಲ್ಲಿ ಖರೀದಿ ಮಾಡಬಹುದು ಪ್ರಸ್ತುತ 1BHK/2BHK ಮನೆಗಳು ಲಭ್ಯವಿದ್ದು ೧ ೩ ಲಕ್ಷ ಇರುತ್ತದೆ ಇದರಲ್ಲಿ ಸಬ್ಸಿಡಿ ಸಹ ಇರುತ್ತದೆ ಅಷ್ಟೇ ಅಲ್ಲದೆ ಸರ್ಕಾರವೇ ಮುಂದೆ ನಿಂತು ಸಾಲ ಸೌಲಭ್ಯವನ್ನು ಸಹ ಕೊಡಿಸುತ್ತದೆ.

ರಾಜೀವ್ ಗಾಂಧಿ ವಸತಿ ಯೋಜನೆ ಅರ್ಹತೆ :-

ಈ ಕೆಳಗಿನ ಅರ್ಹತೆ ಹೊಂದಿರುವವರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇರಬೇಕು.

ಅರ್ಜಿದಾರರು ಕರ್ನಾಟಕದ ಮೂಲ ನಿವಾಸಿಗಳಾಗಿರಬೇಕು.

ಬೀದಿ ವ್ಯಾಪಾರಿಗಳಿಗೆ ಸರ್ಕಾರದ ರಜಿಸ್ಟ್ರೇಶನ್ (Street Vendor ID) ಇರಬೇಕು.

ಬೆಂಗಳೂರಿನಲ್ಲಿ ಯಾವ ಯಾವ ಸ್ಥಳದಲ್ಲಿ ವಸತಿ ಸೌಲಭ್ಯ ದೊರೆಯಲಿದೆ :-

  • ಕೆಂಪೇಗೌಡ ನಗರ
  • ಸರ್ಜಾಪುರ
  • ಯಶವಂತಪುರ
  • ನಾಗರಭಾವಿ
  • ಮಹಾಲಕ್ಷ್ಮಿ ಲೇಔಟ್
  • ಇತರ BBMP ವಾರ್ಡ್ಗಳು

ಈ ಮೇಲೆ ಕಾಣಿಸಿದ ವಿವಿಧ ಸ್ಥಳಗಳಲ್ಲಿ ವಸತಿ ಸೌಲಭ್ಯವನ್ನು ನೀಡಲಾಗುತ್ತಿದೆ

ಬೇಕಾಗುವ ದಾಖಲೆಗಳು :-

ಈ ಕೆಳಗಿನ ಪ್ರಮುಖ ದಾಖಲೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

  • ಆಧಾರ್ ಕಾರ್ಡ್
  • ಆದಾಯ ಪ್ರಮಾಣಪತ್ರ (Income Certificate)
  • ನಿವಾಸ ಪ್ರಮಾಣಪತ್ರ (Domicile Certificate)
  • ಬೀದಿ ವ್ಯಾಪಾರಿಗಳಿಗೆ ವೆಂಡರ್ ID ಕಾರ್ಡ್
  • ಬೆಂಗಳೂರಿನಲ್ಲಿ ಕನಿಷ್ಠ ೫ ವರ್ಷ ವಾಸಿಸಿದ ಪ್ರಮಾಣಪತ್ರ
  • ರೇಷನ್ ಕಾರ್ಡ್

ಅರ್ಜಿ ಸಲ್ಲಿಸುವ ವಿಧಾನ :-

ಈ ಕೆಳೆಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ :-

ಸಂಪರ್ಕಿಸಿ :- 080-22106888 | 080 – 23118888

+91-9448287544 | +91-9448287368

Leave a Reply

Your email address will not be published. Required fields are marked *