ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಯೋಜನೆ 2025 । ಅರ್ಹತೆ , ಕೊನೆಯ ದಿನಾಂಕ… SSP01

SC/ST/OBC Scholarship । SC ST OBC ಸ್ಕಾಲರ್‌ಶಿಪ್ 2025 - ಅರ್ಹತೆ...

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ಈ ಈ ಕೆಳಗೆ ವಿದ್ಯಾರ್ಥಿಗೆ ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ ನೀವು ಸಹ ವಿದ್ಯಾಭ್ಯಾಸ ಮಾಡುತ್ತಿದ್ದರೆ ನಿಮಗೆ ಇಲ್ಲಿದೆ ಸ್ಕಾಲರ್ಶಿಪ್ ನೀವು ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿಸಲ್ಲಿಸಲು ಬೇಕಾಗುವ ದಾಖಲೆ , ಅರ್ಜಿ ಸಲ್ಲಿಸಲು ಲಿಂಕ್ ಈ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿ ಕೊಡ್ತಿನಿ ಈ ಮಾಹಿತಿಯನ್ನು ಎಲ್ಲ ವಿದ್ಯಾರ್ಥಿಗಳು ಶೇರ್ ಮಾಡಿ.

SC/ST/OBC Scholarship

ಪ್ರಿ-ಮೆಟ್ರಿಕ್ ಸ್ಕಾಲರ್ಶಿಪ್ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು SC, ST, OBC, ಮತ್ತು ಮೈನಾರಿಟಿ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ, ಪಾರ್ಸಿ) ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ (1ರಿಂದ 10ನೇ ತರಗತಿ) ನೀಡುವ ಒಂದು ಆರ್ಥಿಕ ಸಹಾಯ ಯೋಜನೆ. ಇದರ ಬಗ್ಗೆ ಈ ಕೆಳಗೆ ನೋಡೋಣ ಬನ್ನಿ

ಈ ಸ್ಕಾಲರ್ಶಿಪ್ ಯೋಜನೆಯ ಉದ್ದೇಶ:-

ಈ ಯೋಜನೆ ಹಲವಾರು ಉದ್ದೇಶವನ್ನು ಹೊಂದಿದ್ದು ನೀವು ಸಹ ಅರ್ಜಿಯನ್ನು ಸಲ್ಲಿಸಬಹುದು

ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರೋತ್ಸಾಹ ನೀಡಲು.

ಶಾಲಾ ಡ್ರಾಪ್-ಔಟ್ ಪ್ರಮಾಣವನ್ನು ಕಡಿಮೆ ಮಾಡಲು.

ವಿದ್ಯಾರ್ಥಿಗಳಿಗೆ ಶುಲ್ಕ, ಪುಸ್ತಕಗಳು, ಯೂನಿಫಾರ್ಮ್, ಮತ್ತು ಇತರ ಖರ್ಚುಗಳಿಗೆ ಸಹಾಯ.

ಯಾರು ಅರ್ಜಿ ಸಲ್ಲಿಸಲು ಅರ್ಹರು :-

ಈ ಕೆಳಗಿನ ಅರ್ಹತೆಯನ್ನು ಹೊಂದಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಥಿಗಳು ಈ ಕೆಳಗಿನವುಗಳನ್ನು ಪೂರೈಸಬೇಕು:

SC/ST/OBC/ಮೈನಾರಿಟಿ ಸಮುದಾಯಕ್ಕೆ ಸೇರಿದವರಾಗಿರಬೇಕು.

1ರಿಂದ 10ನೇ ತರಗತಿ ವಿದ್ಯಾರ್ಥಿಯಾಗಿರಬೇಕು.

ಕುಟುಂಬದ ವಾರ್ಷಿಕ ಆದಾಯ:

SC/ST: ₹2.5 ಲಕ್ಷಕ್ಕಿಂತ ಕಡಿಮೆ.

OBC/ಮೈನಾರಿಟಿ: ₹1 ಲಕ್ಷಕ್ಕಿಂತ ಕಡಿಮೆ (ಯೋಜನೆಗೆ ಅನುಗುಣವಾಗಿ ಬದಲಾಗಬಹುದು).

ಖಾಸಗಿ ಅಥವಾ ಸರ್ಕಾರಿ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಅರ್ಹತೆ.

ಈ ಮೇಲೆ ತಿಳಿಸಲಾದ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯರ್ಥಿಗೆ ಬೆಳಕಾಗುವ ವಿವಿಧ ದಾಖಲೆಗಳ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸಲು ಈ ಎಲ್ಲ ದಾಖಲೆಯನ್ನು ಸಿದ್ಧಪಡಿಸಿಟ್ಟುಕೊಳ್ಳಿ.

ಆಧಾರ್ ಕಾರ್ಡ್ (ವಿದ್ಯಾರ್ಥಿ & ಪೋಷಕರು)

ಜಾತಿ ಪ್ರಮಾಣಪತ್ರ (SC/ST/OBC)

ಆದಾಯ ಪ್ರಮಾಣಪತ್ರ (ತಹಸೀಲ್ದಾರ/ಮಾನ್ಯತೆ ಪಡೆದ ಅಧಿಕಾರಿ)

ಶಾಲಾ ಪ್ರವೇಶ ದಾಖಲೆ (ಅಧ್ಯಯನ ಪ್ರಮಾಣಪತ್ರ)

ಬ್ಯಾಂಕ್ ಪಾಸ್ಬುಕ್ (ವಿದ್ಯಾರ್ಥಿಯ ಹೆಸರಿನಲ್ಲಿ)

ಪಾಸ್ಪೋರ್ಟ್ ಸೈಜ್ ಫೋಟೋ

ಈ ಎಲ್ಲ ದಾಖಲೆಯನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿಟ್ಟುಕೊಂಡು ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ವಿಧಾನ ಮತ್ತು ಲಿಂಕ್ :-

ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡುವ ಮೂಲಕ ನೀವು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು .

ರಾಷ್ಟ್ರೀಯ ಸ್ಕಾಲರ್ಶಿಪ್ ಪೋರ್ಟಲ್ (NSP) ಅಥವಾ ರಾಜ್ಯದ ಅಧಿಕೃತ ವೆಬ್ಸೈಟ್ಗೆ ಹೋಗಿ:

https://scholarships.gov.in (ಕೇಂದ್ರ ಯೋಜನೆ)

ರಾಜ್ಯ ಸರ್ಕಾರದ ಸೈಟ್ (ಉದಾ: Karnataka E-Scholarship)

“New Registration” ಕ್ಲಿಕ್ ಮಾಡಿ.

ವಿದ್ಯಾರ್ಥಿಯ ವಿವರಗಳು, ಜಾತಿ ಪ್ರಮಾಣಪತ್ರ, ಆದಾಯ ದಾಖಲೆ, ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ.

ಲಾಗಿನ್ ID & ಪಾಸ್ವರ್ಡ್ ಬಳಸಿ ಸೈನ್ ಇನ್ ಮಾಡಿ.

“Pre-Matric Scholarship” ಆಯ್ಕೆಯನ್ನು ಆರಿಸಿ ಮತ್ತು ಅರ್ಜಿ ಫಾರ್ಮ್ ನಿಭರಿಸಿ.

ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.

ಸಬ್ಮಿಟ್ ಕ್ಲಿಕ್ ಮಾಡಿ ಮತ್ತು ಅರ್ಜಿ ಪ್ರಿಂಟ್ ಮಾಡಿ.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:-

Scholarship Application Apply for Scholarship

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-


Leave a Reply

Your email address will not be published. Required fields are marked *