ಶಿವಮೊಗ್ಗದಲ್ಲಿ ಭಾರಿ ಮಳೆ ಕಳೆದ 3-4 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತ ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ ಮತ್ತು ಆಗುಂಬೆ ಭಾಗಗಳಲ್ಲಿ ಹೆಚ್ಚಿನ ಮಳೆಯಿಂದ ಹಳ್ಳ, ಕುಳ್ಳಗಳು ಮತ್ತು ನದಿಗಳು ತುಂಬಿ ಹರಿಯುತ್ತಿದ್ದು ಜನರು ಮನೆಯಿಂದ ಹೊರಗೆ ಬರುವುದಕ್ಕೂ ಸಹ ಕಷ್ಟವಾಗುತ್ತಿದ್ದೆ ಇನ್ನು ದನ ಕರುಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ಸೂಕ್ತ ರಕ್ಷಣೆ ಇಲ್ಲದೆ ಪರದಾಡುತ್ತಿವೆ.
ಶಿವಮೊಗ್ಗದಲ್ಲಿ ತುಂಗಾ ನದಿಯ ಪರಿಸ್ಥಿತಿ:
ಸತತವಾಗಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ತುಂಗಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ ಇದೀಗ ಗಾಜನೂರು ಡ್ಯಾಮ್ ನಿಂದ 65,000 ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿದೆ.
ಕೋಟೆ ರಸ್ತೆಯ ಬಳಿಯ ಕೋರ್ಪೈಲನ್ ಛತ್ರ (ಮಂಟಪ) ನೀರಿನಲ್ಲಿ ಮುಳುಗಿದೆ. ಇದು ನದಿಯ ಉಕ್ಕುವಿಕೆಯ ಸೂಚಕವಾಗಿ ಜನರಿಗೆ ಆಕರ್ಷಣೆಯಾಗಿದೆ.
ಪ್ರವಾಸಿಗರಿಗೆ ಹಾಗೂ ನದಿ ದಡದ ಜನರಿಗೆ ಎಚ್ಚರಿಕೆ :-
ಪ್ರವಾಸಿಗರು ನದಿ ಉಕ್ಕಿ ಹರಿಯುವಿಕೆಯನ್ನು ನೋಡಲು ದಂಡು ಗಟ್ಟಲೆ ಬರುತ್ತಿದ್ದು ಜಿಲ್ಲಾಡಳಿತವು ಎಚ್ಚರಿಕೆಯನ್ನು ಹೊರಡಿಸಿದೆ.
ನದಿತೀರದಲ್ಲಿ ಜಾಗರೂಕರಾಗಿರುವಂತೆ ಹಾಗೂ ನೀರಿಗೆ ಇಳಿಯದಂತೆ ಸೂಚನೆಯನ್ನು ಹೊರಡಿಸಲಾಗಿದೆ
ವಿದ್ಯುತ್ ಕಡಿತ :-
ಮಳೆ ಗಾಳಿಯ ಆರ್ಭಟದಿಂದ ಹಲವೆಡೆ ವಿದ್ಯುತ್ ಕಂಬ ಮುರಿದು ಸಾಕಷ್ಟು ಅವಾಂತರವನ್ನು ಸೃಷ್ಟಿಸಿದೆ. ಆಗುಂಬೆ ಭಾಗದಲ್ಲಿ ಕಡಿಮೆ ದೃಶ್ಯತೆ – ವಾಹನಗಳು ಹೆಡ್ಲೈಟ್ ಹಚ್ಚಿ ಚಲಿಸಬೇಕಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ :-
ಶಿವಮೊಗ್ಗ ಜಿಲ್ಲಾಡಳಿತ ಹೆಲ್ಪ್ಲೈನ್: 1077 (ಆಪತ್ತು ನಿರ್ವಹಣೆ).