ಹಾಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ….ನಿಮಗೆಲ್ಲ ಗೊತ್ತಿರುವ ಹಾಗೆ ವಿ ಐ ಪಿ ಗಳು ರಸ್ತೆಯಲ್ಲಿ ಬಂದಾಗ ಸಾಮಾನ್ಯವಾಗಿ ಸೈರನ್ ಹಾಕಿಕೊಂಡು ಹೋಗುತ್ತಿರುವುದು ನೀವೆಲ್ಲ ನೋಡಿರ್ತಿರಾ ಆದರೆ ಇನ್ನುಮುಂದೆ ಈ ಸೈರನ್ ಬಳಕೆಗೆ ಕಡಿವಾಣ ಹಾಕುವ ದೃಷ್ಟಿ ಇಂದ ಪ್ರಕಟಣೆಯನ್ನು ಹೊರಡಿಸಲಾಗಿದೆ.
Sirens Silenced Karnataka Cracks Down on VIP Siren Misuse
ವಿಷಯ :- ವಿಐಪಿ ಸಂಚಾರದ ವೇಳೆ ಸೈರನ್ ಬಳಕೆಗೆ ಕಡಿವಾಣ ಹಾಕುವ ಬಗ್ಗೆ:-
ಹೌದು ಸಾರ್ವಜನಿಕರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ, ವಿಐಪಿ ಸಂಚಾರದ ಸಂದರ್ಭದಲ್ಲಿ ವಾಹನಗಳ ಸೈರನ್ ಬಳಕೆಗೆ ಕಡಿವಾಣ ಹಾಕುವಂತೆ ಎಲ್ಲಾ ಘಟಕಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದ್ದು ಇದೀಗ ಪ್ರಕಟಣೆಯನ್ನು ಹೊರಡಿಸಿದ್ದಾರೆ ಈ ಪ್ರಕಟೆಯ ಅಧಿಕೃತ ಪ್ರತಿಯನ್ನು ಈ ಕೆಳಗೆ ಹಾಕಲಾಗಿದೆ.
ಸೈರನ್ ಹಾಕುವುದರಿಂದ ಆಗುವ ಸಮಸ್ಯೆ :-
ಈ ರೀತಿ ಸೈರನ್ ಹಾಕುವುದರಿಂದ ಹಲವಾರು ಸಮಸ್ಯೆಗಳು ಆಗುತ್ತವೆ ಎನ್ನುವ ದೃಷ್ಟಿಯಿಂದ ಇದನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಇದೀಗ ಸುದ್ದಿ ಬಂದಿದೆ ಹಾಗಾದರೆ ಯಾವೆಲ್ಲ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ನೋಡಿ ವಿಐಪಿ (VIP) ವ್ಯಕ್ತಿಗಳ ಸಂಚಾರದ ಸಮಯದಲ್ಲಿ ಅನಗತ್ಯ ಸೈರನ್ ಬಳಕೆ ಕರ್ನಾಟಕದಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿದೆ. ಇದರಿಂದ ಸಾಮಾನ್ಯ ನಾಗರಿಕರು, ರೋಗಿಗಳು, ವಿದ್ಯಾರ್ಥಿಗಳು ಮತ್ತು ವೃದ್ಧರು ತೀವ್ರ ಅಸೌಕರ್ಯ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಹಲವಾರು ನಿಯಮಗಳನ್ನು ರೂಪಿಸಿದೆ.
ಗಣ್ಯ ವ್ಯಕ್ತಿಗಳ ಸಂಚರಣೆ ಸಮಯದಲ್ಲಿ ಅನವಶ್ಯಕವಾಗಿ ಸೈರನ್ ಬಳಕೆ:-
ಗಣ್ಯ ವ್ಯಕ್ತಿಗಳ ಸಂಚರಣೆ ಸಮಯದಲ್ಲಿ ಅನವಶ್ಯಕವಾಗಿ ಸೈರನ್ ಬಳಕೆ ಮಾಡುವುದರಿಂದ ಗಣ್ಯ ವ್ಯಕ್ತಿಗಳು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾರೆ ಎಂಬ ಬಗ್ಗೆ ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ರವಾನೆಯಾಗುವುದಲ್ಲದೆ ಗಣ್ಯ ವ್ಯಕ್ತಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಇದಲ್ಲದೆ, ಅನಗತ್ಯ ಸೈರನ್ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೇ ಶಬ್ದ ಮಾಲಿನ್ಯವೂ ಉಂಟಾಗುತ್ತದೆ. ಸಾರ್ವಜನಿಕ ರಸ್ತೆಗಳ ಮೇಲೆ ಹಠಾತ್ತಾಗಿ ಸೈರನ್ ಬಳಸುವುದರಿಂದ ಇತರ ವಾಹನ ಚಾಲಕರಿಗೆ ದ್ವಂದ್ವ ಉಂಟಾಗಿ ಯಾವ ಕಡೆಗೆ ಚಲಿಸಬೇಕೆಂಬುದು ತಿಳಿಯದೆ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಿಸಿ ಬೆಂಗಾವಲು ಮತ್ತು ಇತರ ವಾಹನಗಳಿಗೆ ಗೊಂದಲ ಉಂಟುಮಾಡುವ ಸಾಧ್ಯತೆಯೂ ಇರುತ್ತದೆ.
ಒಟ್ಟಾರೆಯಾಗಿ ಸೈರನ್ ದುರುಪಯೋಗವು ಕಾನೂನುಬಾಹಿರ ಮತ್ತು ಸಾರ್ವಜನಿಕ ಅಸೌಕರ್ಯಕ್ಕೆ ಕಾರಣ. ಪ್ರತಿಯೊಬ್ಬ ನಾಗರಿಕರು ಈ ನಿಯಮಗಳನ್ನು ಪಾಲಿಸುವ ಮೂಲಕ ಶಿಸ್ತುಬದ್ಧ ಸಮಾಜ ನಿರ್ಮಾಣಕ್ಕೆ ದೋಷದಾರಿಯಾಗಬೇಕು.
ಅಧಿಕೃತ ಆದೇಶ :- ಇಲ್ಲಿ ಕ್ಲಿಕ್ ಮಾಡಿ
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಸುಗಂಧ ಲ್ಯಾಕ್ಟಿಕ್ ಬಾಡಿ ಲೋಷನ್
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025
- ಭಾಗ್ಯಲಕ್ಷ್ಮಿ ಯೋಜನೆ ದುಡ್ಡು ಬಂದೆ ಬಿಡ್ತು …..ಇಲ್ಲಿ ನೋಡಿ
- ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ